Select Your Language

Notifications

webdunia
webdunia
webdunia
webdunia

ಬಾಗಪ್ಪ ಹತ್ಯೆ ಯತ್ನ: ಪ್ರಮುಖ ಆರೋಪಿ ಪೀರೇಶ್ ಬಂಧನ

ಬಾಗಪ್ಪ ಹತ್ಯೆ ಯತ್ನ: ಪ್ರಮುಖ ಆರೋಪಿ ಪೀರೇಶ್ ಬಂಧನ
ವಿಜಯಪುರ , ಗುರುವಾರ, 17 ಆಗಸ್ಟ್ 2017 (13:03 IST)
ಭೀಮಾ ತೀರದ ಕುಖ್ಯಾತಿಯ ಬಾಗಪ್ಪ ಹರಿಜನ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪೀರೇಶ ಹಡಪದನನ್ನ ಪೊಲೀಸರು ಬಂಧಿಸಿದ್ದಾರೆ.

ಇಂಡಿ ಹೊರವಲಯದ ಡಾಬಾದಲ್ಲಿ ಕಂಠಪೂರ್ತಿ ಕುಡಿದು ತೂರಾಡುತ್ತಿದ್ದ ಪೀರೇಶನನ್ನ ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ವಿಜಯಪುರಕ್ಕೆ ಶಿಫ್ಟ್ ಮಾಡಲಾಗಿದೆ. ಬಂಧಿತನಿಂದ ಕೆಲ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಬಾಗಪ್ಪ ಹರಿಜನ ಹತ್ಯೆಗೆ 25 ಲಕ್ಷ ರೂ. ಸುಪಾರಿ ಪಡೆದಿದ್ದ ಈತ ಇತರೆ 6 ಮಂದಿ ಜೊತೆ ಸೇರಿ ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ.

 ಆಗಸ್ಟ್ 15ರಂದು ಪ್ರಕರಣದ ಇನ್ನಿತರೆ ಆರೋಪಿಗಳಾದ 6 ಮಂದಿಯನ್ನ ಪೊಲೀಸರು ಬಂಧಿಸಿದ್ದರು. ರಮೇಶ್ ಹಡಪದ, ಭೀಮಶ್ಯಾ ಹರಿಜನ, ನಾಮದೇವ ಹೊಡ್ಡಮನಿ, ರಜಾಕ್ ಕಾಂಬ್ಳೆ, ಪ್ರಭು ಜಮಾದಾರ, ಮಲ್ಲೇಶ ಬಿಂಜಗೇರಿಯನ್ನ ಬಂಧಿಸಲಾಗಿತ್ತು.

ಆಗಸ್ಟ್ 8ರಂದು ವಿಜಯಪುರ ಕೋರ್ಟ್`ಗೆ ಕೊಲೆ ಪ್ರಕರಣವೊಂದರ ವಿಚಾರಣೆಗೆ ಆಗಮಿಸಿದ್ದ ಬಾಗಪ್ಪ ಹರಿಜನ ಮೇಲೆ 5 ಸುತ್ತು ಗುಂಡು ಹಾರಿಸಲಾಗಿತ್ತು. ತೀವ್ರವವಾಗಿ ಗಾಯಗೊಂಡಿದ್ದ ಬಾಗಪ್ಪನನ್ನ ಹೆಚ್ಚಿನ ಚಿಕಿತ್ಸೆಗೆ ಹೈದ್ರಾಬಾದ್`ಗೆ ರವಾನಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹತ್ಯೆಗಳಿಗೆ ಪಿಎಫ್‌ಐ ಹೊಣೆ: ಕರಂದ್ಲಾಜೆ