Publish Date: Tue, 15 Aug 2017 (16:29 IST)
Updated Date: Tue, 15 Aug 2017 (16:37 IST)
ಭೀಮಾತೀರದ ಕುಖ್ಯಾತಿಯ ಬಾಗಪ್ಪ ಹರಿಜನ ಮೇಲಿನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು 6 ಮಂದಿ ಆರೋಪಿಗಳನ್ನ ಬಂಧಿಸಿದ್ದಾರೆ.
ಹೆಚ್ಚುವರಿ ಎಸ್ಪಿ ನೇತೃತ್ವದ ತಂಡ 6 ಆರೋಪಿಗಳನ್ನ ಬಂಧಿಸಿದ್ದು, ಬಂಧಿತರಿಂದ 1 ಬೊಲೆರೋ ವಾಹನ ಮತ್ತು 6 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನ ರಮೇಶ್ ಹಡಪದ, ಭೀಮಶ್ಯಾ ಹರಿಜನ, ನಾಮದೇವ ಹೊಡ್ಡಮನಿ, ರಜಾಕ್ ಕಾಂಬ್ಳೆ, ಪ್ರಭು ಜಮಾದಾರ, ಮಲ್ಲೇಶ ಬಿಂಜಗೇರಿ ಎಂದು ಗುರ್ತಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಎಸ್ಪಿ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ.
ಆಗಸ್ಟ್ 8ರಂದು ಕೊಲೆ ಪ್ರಕರಣವೊಂದರ ವಿಚಾರಣೆಗಾಗಿ ಬಾಗಪ್ಪ ಹರಿಜನ ವಿಜಯಪುರ ಕೋರ್ಟ್`ಗೆ ಹಾಜರಾಗಲು ಬಂದಿದ್ದಾಗ ಗುಂಡಿನ ದಾಳಿ ನಡೆದಿತ್ತು. 5 ಸುತ್ತು ಗುಂಡು ಬಾಗಪ್ಪ ಹರಿಜನ ಮೇಲೆ ಪ್ರಯೋಗಿಸಲಾಗಿತ್ತು. ತೀವ್ರ ಗಾಯಗೊಂಡಿರುವ ಬಾಗಪ್ಪ ಹರಿಜನ ಹೈದ್ರಾಬಾದ್`ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ