Select Your Language

Notifications

webdunia
webdunia
webdunia
Saturday, 12 April 2025
webdunia

ವಿಜಯಪುರದಲ್ಲಿ ಲಘು ಭೂಕಂಪ: ಹೆದರಿ ಕಂಗಾಲಾದ ಗ್ರಾಮಸ್ಥರು

ಭೂಕಂಪ
ವಿಜಯಪುರ , ಬುಧವಾರ, 9 ಆಗಸ್ಟ್ 2017 (16:50 IST)
ವಿಜಯಪುರದಲ್ಲಿ ಲಘು ಭೂಕಂಪ ಸಂಭವಿಸಿದ್ದು, ಜನರು ಮನೆಯಿಂದ ಹೊರಗೊಡಿ ಬಂದ ಘಟನೆ ವರದಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಐನಾಪುರದಲ್ಲಿ 3 ರಿಂದ 4 ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದ್ದರಿಂದ, ಹೆದರಿದ ಜನತೆ ಮನೆಯಿಂದ ಹೊರಗೆ ಬಂದು ಕೆಲ ಕಾಲ ಆತಂಕಕ್ಕೊಳಗಾದರು ಎನ್ನಲಾಗಿದೆ.
 
ಇದೊಂದು ಲಘು ಭೂಕಂಪವಾಗಿದ್ದು ಹೆದರುವ ಅಗತ್ಯವಿಲ್ಲ. ಇದು ಭೂಪದರುಗಳಲ್ಲಿರುವ ಸಂಘರ್ಷದಿಂದ ಇಂತಹ ಲಘು ಭೂಕಂಪ ಸಂಭವಿಸುತ್ತದೆ ಎಂದು ಭೂಗರ್ಭ ಶಾಸ್ತ್ರಜ್ಞರು ಮಾಹಿತಿ ನೀಡಿದ್ದಾರೆ.
 
ಮನೆಯೊಳಗಿನ ವಸ್ತುಗಳು ಅಲುಗಾಡಲು ಆರಂಭಿಸುತ್ತಿದ್ದಂತೆ ಗ್ರಾಮಸ್ಥರು ಭಯಭೀತರಾಗಿ ಹೊರಗೆ ಬಂದಿದ್ದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ನಾಯಕರ ಡೋಂಗಿತನ ಕಳಚಿಬಿಡಿ: ಸಿಎಂ ವಾಗ್ದಾಳಿ