Publish Date: Fri, 17 May 2019 (12:21 IST)
Updated Date: Fri, 17 May 2019 (12:26 IST)
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ಪ್ರಾರ್ಥಿಸಿ ಶಬರಿ ಮಲೆಯಾತ್ರೆ ಕೈಗೊಳ್ಳಲಾಗಿದೆ.
ಶಬರಿ ಮಲೆಯಾತ್ರೆಗೆ ಹೊರಟಿದ್ದಾರೆ ಮಂಡ್ಯದ 35 ಮಂದಿ ಜೆಡಿಎಸ್ ಕಾರ್ಯಕರ್ತರು. ನಿಖಿಲ್ ಕುಮಾರಸ್ವಾಮಿ, ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿದ್ದಾರೆ.
ಇಂಡುವಾಳು ಗ್ರಾಮದ ರಾಮ ಮಂದಿರದಲ್ಲಿ ಇರುಮುಡಿ ಕಟ್ಟಿಕೊಂಡು ಶಬರಿ ಮಲೆ ಯಾತ್ರೆಕೈಗೊಂಡಿದ್ದಾರೆ ಜೆಡಿಎಸ್ ಕಾರ್ಯಕರ್ತರು.
ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮದ ಜನರು ನಿಖಿಲ್ ಗೆಲುವಿಗೆ ಪ್ರಾರ್ಥಿಸಿ ದೇವರ ಮೊರೆ ಹೋಗಿದ್ದಾರೆ.
ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಅಂಬರೀಷ್ ಪತ್ನಿ ಸುಮಲತಾ ಸ್ಪರ್ಧೆಯಿಂದ ಗಮನ ಸೆಳೆದಿದೆ ಮಂಡ್ಯ ಲೋಕ ಸಭೆ ಕ್ಷೇತ್ರ. ಈ ಹಿಂದೆ ಪುತ್ರನ ಗೆಲುವಿಗೆ ಟೆಂಪಲ್ ರನ್ ನಡೆಸಿದ್ದರು ಸಿಎಂ ಕುಮಾರಸ್ವಾಮಿ.