Select Your Language

Notifications

webdunia
webdunia
webdunia
webdunia

ಅಯ್ಯಪ್ಪ ಮಾಲಾಧಾರಿಗಳ ವಿಭಿನ್ನ ಹರಕೆ

ಅಯ್ಯಪ್ಪ ಮಾಲಾಧಾರಿ

geetha

ಯಾದಗಿರಿ , ಶನಿವಾರ, 6 ಜನವರಿ 2024 (20:30 IST)
ಯಾದಗಿರಿ - ಯಾದಗಿರಿ ಜಿಲ್ಲೆಯ ಶಹಾಪುರ  ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಅದ್ದೂರಿ ಶೋಭಾಯಾತ್ರೆ ನಡೆದಿದೆ.. ಈ ವೇಳೆ ಅಯ್ಯಪ್ಪ ಮಾಲಾಧಾರಿಗಳು ವಿಭಿನ್ನವಾಗಿ ಹರಕೆ ತೀರಿಸಿದ್ದಾರೆ.. ಅಯ್ಯಪ್ಪ ಪೂಜೆಯ ವೇಳೆ ಕೊತ ಕೊತ ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ಮಿರ್ಚಿ ತೆಗೆಯುವ ದೃಶ್ಯಗಳು ನೆರದಿದ್ದ ಭಕ್ತರನ್ನು ಮೈ ಜುಮ್‌ ಎನ್ನಿಸುವಂತೆ ಮಾಡಿತ್ತು. ‌ಸಾವಿರಾರು ಭಕ್ತರ ಸಮ್ಮುಖದಲ್ಲಿ ಕುದಿಯುವ ಎಣ್ಣೆಗೆ ಕೈ ಹಾಕಿ ಕಜ್ಜಾಯ ತೆಗೆದರು.

ಕುದಿಯುವ ಎಣ್ಣೆ ಮತ್ತು ಮಿರ್ಚಿಗಳನ್ನು ಹೊಂದಿದ್ದ ಬಾಣಲೆಯ ಸುತ್ತಲೂ ಹೂವುಗಳನ್ನು ಎಸೆಯುತ್ತಾರೆ. ಕುದಿಯುತ್ತಿರುವ ಎಣ್ಣೆಯಿರುವ ಒಲೆಯ ಮುಂದೆ ಅಯ್ಯಪ್ಪ ಮಾಲಾಧಾರಿಗಳು ಬರುತ್ತಾರೆ. ಬೆಟ್ಟದ ದೊರೆ ಅಯ್ಯಪ್ಪ ಸ್ವಾಮಿಯನ್ನು ಸ್ಮರಿಸಿ ಅಗ್ನಿ ಪ್ರವೇಶಿಸಿ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾದರು.

Share this Story:

Follow Webdunia kannada

ಮುಂದಿನ ಸುದ್ದಿ

ತಂದೆ ಮಗ ಕೆರೆಯಲ್ಲಿ ಮುಳುಗಿ ಸಾವು