Select Your Language

Notifications

webdunia
webdunia
webdunia
Thursday, 27 February 2025
webdunia

ಮಗು ಸಾವಿನ ಕಾರಣ ತಿಳಿಯಲು ಶವ ಪರೀಕ್ಷೆ

ಮಗು ಸಾವಿನ ಕಾರಣ ತಿಳಿಯಲು ಶವ ಪರೀಕ್ಷೆ
ಕೊರಟಗೆರೆ , ಬುಧವಾರ, 2 ಆಗಸ್ಟ್ 2023 (20:47 IST)
ಕಾಡುಗೊಲ್ಲರ ಮೂಢನಂಬಿಕೆಗೆ ಹಸುಗೂಸು ಬಲಿ ಪ್ರಕರಣ ಸಂಬಂಧ ಮಗುವಿನ ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕಿನ ತೋವಿನಕೆರೆ ಬಳಿಯ ಬಡಮುದ್ದಯ್ಯನಪಾಳ್ಯದಲ್ಲಿ ಈ ಘಟನೆ ನಡೆದಿದೆ. ವಸಂತ, ಸಿದ್ದೇಶ್ ದಂಪತಿಯ ಮಗು ಕಳೆದ ಜುಲೈ 23ರಂದು ಮೃತ ಪಟ್ಟಿತ್ತು. ಮೃತಪಟ್ಟಿದ್ದ ಮಗುವನ್ನ ಸಿದ್ದೇಶ್ ಸ್ವಗ್ರಾಮ ಬಡಮುದ್ದಯ್ಯನಪಾಳ್ಯದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು‌. ವೈದ್ಯರು ಮಗುವಿನ ದೇಹದ ಕೆಲ ಅಂಗಾಂಗಳನ್ನ ಸಂಗ್ರಹಿಸಿಕೊಂಡು ಪರೀಕ್ಷೆಗೆ ಕೊಂಡಯ್ದಿದ್ದಾರೆ. ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಉಪಸ್ಥಿತಿಯಲ್ಲಿ ಶವವನ್ನು ಹೊರಗೆ ತೆಗೆಯಲಾಗಿದೆ. ಮಗು ಸಾವಿನ ನಿಜವಾದ ಕಾರಣ ತಿಳಿಯಲು ಶವ ಪರೀಕ್ಷೆ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

CBI ಮೂಲಕ ತನಿಖೆ ನಡೆಸುವಂತೆ ಮನವಿ