ಯುವಕ – ಯುವತಿಯರ ಆಟೋ ರನ್ ಗೋವಾಕ್ಕೆ ಕಾಲಿಟ್ಟಿದೆ.
ಕನ್ಯಾಕುಮಾರಿಯಿಂದ ಗುಜರಾತ್ ವರೆಗೆ ಹಮ್ಮಿಕೊಂಡಿರುವ ಸೇವಾ ಯುಕೆ (ಇಂಗ್ಲೆಂಡ್) ಯುವಕ - ಯುವತಿಯರ ಆಟೋರನ್ ಯಾತ್ರೆ ಹುಬ್ಬಳ್ಳಿ ನಗರಕ್ಕೆ ಬಂದಿದೆ.
ಮುಂದಿನ ಪ್ರಯಾಣ ಗೋವಾಕ್ಕೆ ಬೆಳಸಲಿರುವ ತಂಡಕ್ಕೆ ಸಚಿವ ಜಗದೀಶ್ ಶೆಟ್ಟರ್ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ನಗರದ ಜಿಮ್ ಖಾನಾ ಮೈದಾನದಿಂದ ಹೊರಟಿರುವ ಈ ಆಟೋರನ್ ಯಾತ್ರೆ ಸುಮಾರು 30 ಅಟೋಗಳ ಮೂಲಕ ಗುಜರಾತ್ ವರೆಗೆ ಪ್ರಯಾಣ ಬೆಳೆಸಲಿದ್ದಾರೆ. ಪ್ರಯಾಣದಲ್ಲಿ ದೇಣಿಗೆ ಸಂಗ್ರಹ ಮಾಡಿ ಅನಾಥರು, ಅಂಧರು, ವಿಕಲಾಂಗರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದ್ದಾರೆ.