Publish Date: Mon, 13 Nov 2017 (15:10 IST)
Updated Date: Mon, 13 Nov 2017 (15:12 IST)
ಅಪ್ರಾಪ್ತ ಬಾಲಕನನ್ನು ಕಿಡ್ನಾಪ್ ಮಾಡಿದ ಕಾಮುದಾಹಿ ಅಂಟಿಯೊಬ್ಬಳು ನಂತರ ಆತನ ಮೇಲೆ ಅತ್ಯಾಚಾರವೆಸಗಿದ ವಿಚಿತ್ರ ಘಟನೆ ನಗರದಲ್ಲಿ ವರದಿಯಾಗಿದೆ.
24 ವರ್ಷ ವಯಸ್ಸಿನ ವಿವಾಹಿತ ಮಹಿಳೆಯಾದ ನಳಿನಿ ಪ್ರಿಯಾ, ಕಳೆದ ಸೆಪ್ಟೆಂಬರ್ 8 ರಂದು ಬಾಲಕನನ್ನು ಅಪಹರಿಸಿ ತಮಿಳುನಾಡಿಗೆ ಕರೆದುಕೊಂಡು ಒತ್ತಾಯಪೂರ್ವಕವಾಗಿ ಸೆಕ್ಸ್ ಸುಖ ಅನುಭವಿಸಿದ್ದಾಳೆ ಎಂದು ಬಾಲಕನ ತಂದೆತಾಯಿ ಆರೋಪಿಸುತ್ತಿದ್ದಾರೆ.
ವಿವಾಹಿತ ಮಹಿಳೆ ನಳಿನಿ ಬಾಲಕನನ್ನು ಅಪಹರಿಸಿದ ನಂತರ ಬಾಲಕನ ತಂದೆತಾಯಿ ಪೊಲೀಸ್ ಠಾಣೆಯಲ್ಲಿ ಮಗ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ನಳಿನಿ ತಮ್ಮ ಪುತ್ರನನ್ನು ಅಪಹರಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಮಹಿಳೆ ತಮಿಳುನಾಡಿನ ವೆಲಾಂಗಣಿಯಲ್ಲಿರುವುದು ಪತ್ತೆಯಾಗಿತ್ತು. ಕೂಡಲೇ ವೆಲಂಗಣಿ ಪಟ್ಟಣಕ್ಕೆ ತೆರಳಿದ ಪೊಲೀಸರು ಮಹಿಳೆ ಮತ್ತು ಬಾಲಕನನ್ನು ವಶಕ್ಕೆ ತೆಗೆದುಕೊಂಡು ನಗರಕ್ಕೆ ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ.
ನಳಿನಿ ಕೆಲ ಗಂಡನಿಂದ ದೂರವಾಗಿದ್ದರಿಂದ ಸೆಕ್ಸ್ ಸುಖಕ್ಕಾಗಿ ಹಾತೊರೆಯುತ್ತಿದ್ದಳು. ಕೊನೆಗೂ ಬಾಲಕನನ್ನು ಅಪಹರಿಸಿ ಆತನಿಂದ ಸೆಕ್ಸ್ ಸುಖ ಪಡೆಯುವ ಸಂಚು ರೂಪಿಸಿದ್ದಳು ಎಂದು ಮೂಲಗಳು ತಿಳಿಸಿವೆ.
ಮಹಿಳೆ ನಳಿನಿ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.