Select Your Language

Notifications

webdunia
webdunia
webdunia
webdunia

ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಆದ್ರೆ ಆಟೋ ಗ್ಯಾಸ್ ಬೆಲೆ ಇಳಿಕೆಗೆ ನಿರ್ಲಕ್ಷ

ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಆದ್ರೆ ಆಟೋ ಗ್ಯಾಸ್ ಬೆಲೆ ಇಳಿಕೆಗೆ ನಿರ್ಲಕ್ಷ
bangalore , ಸೋಮವಾರ, 6 ಜೂನ್ 2022 (18:58 IST)
ಪೆಟ್ರೋಲ್ ಡೀಸೆಲ್ ಬೆಲೆ ಏನೋ ಕಮ್ಮಿಯಾಯಿತು , ಇತ್ತ ಅಡುಗೆ ಗ್ಯಾಸ್ ದರವನ್ನು ಕೂಡಾ ಕೇಂದ್ರ ಸರ್ಕಾರ ಇಳಿಕೆ ಮಾಡಿದೆ  ಆದ್ರೆ ಆಟೋ ಗ್ಯಾಸ್ ದರವನ್ನು ಯಾಕೆ ಇಳಿಕೆ ಮಾಡಿಲ್ಲ ಅಂತ ಆಟೋ ಡ್ರೈವರ್ಸ್ ಆಕ್ರೋಶಭರಿತರಾಗಿದ್ದಾರೆ.ಮೊನ್ನೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಾ ಕಡಿಮೆಗೊಳಿಸಿದ ಮೋದಿ ಅವರು ಜನರಿಗಾಗಿ ತೈಲಬೆಲೆಯಲ್ಲಿ ಇಳಿಕೆ ಮಾಡಲಾಗಿದೆ ಅಂತ ಹೇಳಿ ಟ್ವಿಟ್ ಮಾಡಿದ್ರು . ಆದ್ರೆ ಈಗ ಅದೇ ಜನ ಅಂದ್ರೆ ಆಟೋ ಡ್ರೈವರ್ ಗಳು ಮೋದಿಯವರನ್ನ ಪ್ರಶ್ನೆ ಮಾಡುತ್ತಿದ್ದಾರೆ .ನಾವೇನು ಜನರಲ್ವೆ ಆಟೋ ಗ್ಯಾಸ್ ದರವನ್ನು ಯಾಕೆ ಮಾಡಿಲ್ಲ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಕಳೆದ 3 ತಿಂಗಳು ಹಿಂದೆ ಆಟೋ ದರ ಏರಿಕೆಯಯ್ತು . ಇದರಿಂದ  ನಾಲ್ಕು ಕಾಸು ಹೆಚ್ಚು ಸಂಪಾದಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಆಟೋ ಗ್ಯಾಸ್ ದರ ಮಾತ್ರ ಜಾಸ್ತಿಯಾಗುತ್ತಲೇ ಇದೆ . ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 40 ರೂಪಾಯಿ ಜಾಸ್ತಿಯಾಗಿದೆ . ಇದರಿಂದ ಆಟೋ ಚಾಲಕರು ಆಟೋ ಗ್ಯಾಸ್ ಕೂಡ ಇಳಿಕೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ . 
ಕಳೆದ ಮೂರು ತಿಂಗಳಲ್ಲಿ ಆಟೋ ಗ್ಯಾಸ್ ದರ ಸುಮಾರು 27 ರೂ. ಏರಿಕೆಯಾಗಿದೆ. ಸದ್ಯ ರಾಜಧಾನಿಯಲ್ಲಿ ಇಂದು ಒಂದು ಲಿ. ಆಟೋ ಗ್ಯಾಸ್ ದರ 77.24 ಪೈಸೆ ಗೆ ತಲುಪಿದೆ .  ಸಹಜವಾಗೇ ಈ ದರ ಏರಿಕೆ ಆಟೋ ಚಾಲಕರ ಜೇಬಿಗೆ ತೂತು ಕೊರೆದಿದೆ ಮತ್ತು ದಿನದ ದುಡಿಮೆಯಲ್ಲಿ ನಾಲ್ಕು ಕಾಸು ಉಳಿಸುವ ಅವರ ನಿರೀಕ್ಷೆಯನ್ನು ಮಣ್ಣುಪಾಲು ಮಾಡಿದೆ. ಪ್ರಯಾಣ ದರ ಹೆಚ್ಚಳ ಪ್ರಯಾಣಿಕರಿಗೆ ಹೊರೆಯಾಗಿದ್ದರೆ,  ಗ್ಯಾಸ್‌ ದರ ಹೆಚ್ಚಳ ಮಾಡಿರುವುದು ಚಾಲಕರಿಗೆ ಹೊರೆಯಾಗಿದೆ. ಹೀಗಾಗಿ ಆಟೋ ಚಾಲಕರು ಪೆಟ್ರೋಲ್ ಡೀಸೆಲ್ ಬೆಲೆ ಯಂತೆ ಆಟೋ ಗ್ಯಾಸ್ ದರವನ್ನು ಇಳಿಕೆ ಮಾಡಬೇಕು ಅಂತ ಕೇಳಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಹಣಕ್ಕಾಗಿ ನಿತ್ಯ ಪೀಡಿಸುತ್ತಿದ್ದ ಮಗನನ್ನೇ ಕೊಂದ ತಂದೆ!