Select Your Language

Notifications

webdunia
webdunia
webdunia
webdunia

ಅಕ್ರಮವಾಗಿ ಕಸಾಯಿಖಾನೆ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ

Attack on the place where the slaughterhouse was held illegally
magaluru , ಶುಕ್ರವಾರ, 27 ಆಗಸ್ಟ್ 2021 (19:04 IST)
ಅಕ್ರಮವಾಗಿ ಕಸಾಯಿಖಾನೆ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ.
ಕಡಬ ಗ್ರಾಮದ ಕಳಾರ ಎಂಬಲ್ಲಿ ಮಹಮ್ಮದ್ ಇಸ್ಮಾಯಿಲ್ ಎಂಬುವವರ ಹಳೆಯ ಮನೆಯ ಹಿಂಬದಿಯ ಶೆಡ್ ವೊಂದರಲ್ಲಿ ಅಕ್ರಮವಾಗಿ ದನದ ಮಾಂಸ ಮಾಡುತ್ತಿರುವ ಕುರಿತು ಬಂದ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ. ಅಕ್ರಮವಾಗಿ ಮಾಂಸ ಮಾಡುತ್ತಿದ್ದ ಮೂವರು ವ್ಯಕ್ತಿಗಳು ಓಡಿ ಪರಾರಿಯಾಗಲು ಯತ್ನಿಸಿದ್ದು ಆರೋಪಿತ ಅಬ್ದುಲ್ ರಹಿಮಾನ್ ಎಂಬಾತನನ್ನು ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೇ ದನದ ಕರುವನ್ನು ಕಡಿದು ಮಾಂಸ ಮಾಡುತ್ತಿದ್ದ ಸ್ಥಳದಲ್ಲಿದ್ದ ಪ್ಲಾಸ್ಟಿಕ್ ಟಾರ್ಪಾಲಿನಲ್ಲಿದ್ದ ಸುಮಾರು 40 ಕೆಜಿಯಷ್ಟು ದನದ ಮಾಂಸ, ದನದ ನಾಲ್ಕು ಕಾಲುಗಳ ಕಳೆ‌ ಬರಹ, ಎಲೆಕ್ಟ್ರಾನಿಕ್ ತೂಕ ಮಾಪನ 1, ಕಬ್ಬಿಣದ ಸತ್ತಾರ್ ಕತ್ತಿಗಳು 2,  ಕಬ್ಬಿಣದ ಚೂರಿಗಳು 3, ಕಾಟು ಮರದ ತುಂಡು 1, ಶೆಡ್ ನ ಹೊರಗಡೆ ಕಟ್ಟಿ ಹಾಕಿದ್ದ ನಾಲ್ಕು ದನದ ಕರುಗಳನ್ನು ವಶಕ್ಕೆ ಪಡೆಯಲಾಗಿದೆ. ಸ್ವಾಧೀನಪಡಿಸಿಕೊಂಡ ದನ ಕರುವಿನ ಮಾಂಸ ಹಾಗೂ ಜೀವಂತ ದನದ ಕರುಗಳ ಅಂದಾಜು ಮೌಲ್ಯ 19, 500 ಆಗಬಹುದು ಎಂದು ಹೇಳಲಾಗಿದೆ. ಆರೋಪಿತರಾದ ಮಹಮ್ಮದ್ ಶರೀಫ್ ಮತ್ತು ಮಹಮ್ಮದ್ ಮುಸ್ತಫಾ ಎಂಬುವವರು ಓಡಿ ಪರಾರಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗಾವಿಯಲ್ಲಿ 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ