Select Your Language

Notifications

webdunia
webdunia
webdunia
Saturday, 5 April 2025
webdunia

ಟಿಎಂಸಿ ನಾಯಕನನ್ನು ಬಂಧಿಸಲು ತೆರಳಿದ್ದ ಇಡಿ ಅಧಿಕಾರಿಗಳ ಮೇಲೆ ದಾಳಿ

Attack

geetha

ಪಶ್ಚಿಮ ಬಂಗಾಳ , ಶುಕ್ರವಾರ, 5 ಜನವರಿ 2024 (17:20 IST)
ಅಕ್ರಮ ಆಸ್ತಿ ಪ್ರಕರಣದ ಆರೋಪದ ಮೇಲೆ ದಾಳಿ ನಡೆಸಲು ತೆರಳಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೇ 200 ಮಂದಿಗೂ ಹೆಚ್ಚು ಜನರ ಗುಂಪೊಂದು ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ 24 ಪರಗಣ ಜಿಲ್ಲೆಯ ಸಂದೇಶ್‌ ಖಲಿಯಲ್ಲಿ ಶುಕ್ರವಾರ ನಡೆದಿದೆ.
 
ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ನಾಯಕ ಶಾಹ್‌ ಜಹಾನ್‌ ಶೇಕ್‌ ನನ್ನು ಬಂಧಿಸಲು ಇಡಿ ಅಧಿಕಾರಿಗಳು ತೆರಳಿದ್ದರು.ದಾಳಿಯಲ್ಲಿ ಹಲವು ಇ.ಡಿ ಅಧಿಕಾರಿಗಳು ಭೀಕರವಾಗಿ ಗಾಯಗೊಂಡದ್ದು, ಅಧಿಕಾರಿಗಳ ವಾಹನವನ್ನೂ ಸಹ ಪುಡಿಗಟ್ಟಲಾಗಿದೆ. ದಾಳಿಯಲ್ಲಿ ಅರೆ ಮಿಲಟರಿ ಪಡೆಯ ಯೋಧರೂ ಸಹ ಗಾಯಗೊಂಡಿದ್ದಾರೆ. ಸ್ವತಃ ಶಾಜಹಾನ್‌ ಶೇಖ್‌ ಗಲಭೆಗೆ ಪ್ರಚೋದನೆ ನೀಡಿದ್ದು, ಇ ಡಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವಂತೆ ಗ್ರಾಮಸ್ಥರಿಗೆ ಪ್ರಚೋದನೆ ನೀಡಿದ್ದಾನೆ. ಸಧ್ಯ ಆರೋಪಿಯನ್ನು ಬಂಧಿಸಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಕರ ಕನಸಿಗೆ ಸುಪ್ರೀಂ ಕೋರ್ಟ್‌ ತಣ್ಣೀರು