Webdunia - Bharat's app for daily news and videos

Install App

ಕಾಂಗ್ರೆಸ್ ಸರ್ಕಾರದ ವಿರುದ್ಧ ಅಶ್ವಥ್ ನಾರಾಯಣ ವಾಗ್ದಾಳಿ

Webdunia
ಸೋಮವಾರ, 25 ಡಿಸೆಂಬರ್ 2023 (15:03 IST)
ರೈತರ ವಿಚಾರವಾಗಿ ಶಿವಾನಂದಾ ಪಾಟೀಲ್ ಹೇಳಿಕೆ ವಿಚಾರವಾಗಿ ಮಾಜಿ ಡಿಸಿಎಂ ಅಶ್ವಥ್ ನಾರಾಯಣ ಪ್ರತಿಕ್ರಿಯಿಸಿದ್ದಾರೆ.ಶಿವಾನಂದಾ ಪಟೀಲ್ ಬಾರೀ ಎಡವಟ್ಟು ಮಾಡಿದ್ದಾರೆ.ರೈತರಿಗೆ ಅವಮಾನ ಮಾಡಿದ್ದಾರೆ.ಅವರು ದರ್ಬಾರು ನಡೆಸುತ್ತಿದ್ದಾರೆ.ಇವರ ಮನೆ ಹಣ ತೆಗೆದುಕೊಂಡು ರೈತರಿಗೆ ದಾನ ಧರ್ಮ ಮಾಡಿದ್ದಾರೆ ಅಂದುಕೊಂಡಿದ್ದಾರೆ.ಏನು ಹೇಳಿಕೆ ಕೊಟ್ಟರು ಪರವಾಗಿಲ್ಲ ನಡೆಯುತ್ತೆ ಎಂದುಕೊಂಡಿದ್ದಾರೆ ಇದಕ್ಕೆ ಮುಂಚೆ ಕೂಡ ಈ ತರಹ ಹೇಳಿಕೆ ಕೊಟ್ಟಿದ್ದಾರೆ.
 
ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡೋದು.ರೈತರು ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ತಾರೆ ಎನ್ನೋದು.ರೈತರು ಬರಗಾಲ ಕಾಯೋ ಹಂತಕ್ಕೆ ಬಂದಿಲ್ಲ.ಅವರು ಯಾರಿಂದಲೋ  ನಿರೀಕ್ಷೆ ಮಾಡಲ್ಲ.ಅವರು ಅನ್ನದಾತ  ಪ್ರಕೃತಿ  ವಿಕೋಪ ಬರಲಿ ಅಂತಾ ಯಾರು ಕಾಯಲ್ಲ.ಇಂತ ರೈತ ವಿಚಾರದಲ್ಲಿ ಒಬ್ಬ ಸಚಿವನಾಗಿ ಇವತ್ತು ಹೇಳಿಕೆ ಕೊಟ್ಟಿರೋದು  ದುರದೃಷ್ಟಕರ.ಇವರು ಮಂತ್ರಿಗಿರಿಯಲ್ಲಿ ಮುಂದುವರಿಯಬಾರದು.ಕಾಂಗ್ರೆಸ್ ಪಕ್ಷ ಇದನ್ನ ಅನುಮೋದಿಸುತ್ತಾ?ಸಾಲಮನ್ನಾ ಆಗಲಿ ಅಂತಾ ರೈತ ಹೇಳಿಕೆ ಕೊಟ್ಟಿರೋದು.ಇವರು ಮಾನಸಿಕ ಅಸ್ವತ್ತರಾಗಿದ್ದರಾ ಅಂತಾ  ಕಾಣಿಸುತ್ತೆ.ಇದು ಕರ್ನಾಟಕಕ್ಕೆ ಮಾಡಿದ ಅವಮಾನ.ಸಿದ್ದರಾಮಯ್ಯ ಅವರಿಗೆ ರೈತರ ಬಗ್ಗೆ ಗೌರವ ಇದೆ.ತಕ್ಷಣ ಕ್ರಮ ತೆಗದುಕೊಳ್ಳಲಿ.ಹೈದ್ರಾಬಾದ್ ನ ಮದುವೆವೊಂಸರಲ್ಲಿ ಹಣ ಎಸೆದುಕೊಂಡು ವೈಭವ ಮೆರೆದವರು.ತಕ್ಷಣ ಇವರನ್ನ ಸಚಿವ ಸ್ಥಾನದಿಂದ ಕೆಳಗಿಳಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಅಶ್ವಥ್ ನಾರಾಯಣ ಹೇಳಿದ್ರು.
 
ಹಿಜಾಬ್ ಕುರಿತಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಅಶ್ವಥ್ ನಾರಾಯಣ ಪ್ರತಿಕ್ರಿಯಿಸಿದ್ದು,ಶಾಲೆಗಳಲ್ಲಿ‌ ಎಲ್ಲರಿಗೂ ಒಂದೇ  ಸಮವಸ್ತ್ರ ಇರಬೇಕು.ಇದನ್ನ ಕಾನೂನು ಪೂರಕವಾಗಿ ಮಾಡಿದ್ದಾರೆ.ವಿಭಜನೆ ಮಾಡುವ ದೃಷ್ಟಿಯಿಂದ ಸಮವಸ್ತ್ರ ಮಾಡಿಲ್ಲ.ತುಷ್ಟೀಕರಣದ ರಾಜಕಾರಣಕ್ಕೆ ಸಿದ್ದರಾಮಯ್ಯ ಪ್ರಯತ್ನ ಮಾಡ್ತಿದ್ದಾರೆ.

ಶಾಲೆಗಳಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಾಣಬಾರದು.ಎಲ್ಲ ಮಕ್ಕಳು ಒಂದಾಗಿರಲು ಮಾಡಲು ಈ ಸಮವಸ್ತ್ರ ಮಾಡಿದ್ದಾರೆ.ರಾಜಕೀಯ ಪ್ರೇರಿತವಾಗಿ ಈ ರೀತಿಯ ಹೇಳಿಕೆ ನೀಡ್ತಿದ್ದಾರೆ.ಹಿಜಾಬ್ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ.ಗೊಂದಲ ನಿರ್ಮಾಣ ಮಾಡಲು ಈ ರೀತಿಯ ಹೇಳಿಕೆ ನೀಡ್ತಿದ್ದಾರೆ.ಸಮಸ್ಯೆ ನಿರ್ವಹಣೆ ಮಾಡುವವರು, ಸಮಸ್ಯೆ ನಿರ್ಮಾಣ ಮಾಡುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಅಶ್ವಥ್ ನಾರಾಯಣ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments