Publish Date: Tue, 25 Apr 2023 (19:20 IST)
Updated Date: Tue, 25 Apr 2023 (19:57 IST)
ಮಂಡ್ಯದಲ್ಲಿ ಈ ಬಾರಿ ಕಮಲ ಅರಳಿಸಲು ಬಿಜೆಪಿ ತಯಾರಿ ನಡೆಸಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್ ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ಸಮಾಲೋಚನೆ ನಡೆಸಿದ್ದಾರೆ.. ಮರಿಗೌಡ ಬಡಾವಣೆಯ, ಕೆರಗೋಡು ಕೃಷ್ಣಪ್ಪ ಮತ್ತು ಅಭಿಷೇಕ್ ಮನೆಗೆ ಅಶೋಕ್ ಜಯರಾಮ್ ಭೇಟಿ ನೀಡಿದ್ದು, ಸಮಾಲೋಚನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಬಡಾವಣೆಯ ಮುಖಂಡರು ಉಪಸ್ಥಿತರಿದ್ದರು. ಇನ್ನು ಅಶೋಕ್ ಜಯರಾಮ್ ಕಚೇರಿ ಆವರಣದಲ್ಲಿ, ಮಂಡ್ಯ ತಾಲ್ಲೂಕು ಕೆರಗೋಡು ಹೋಬಳಿಯ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು.