ಉಡುಪಿ: ಈಚೆಗೆ ನಾವು ಧರ್ಮಸ್ಥಳ ಕ್ಷೇತ್ರದ ಮೇಲೆ ನಡೆಯುತ್ತಿರುವ ವೈಚಾರಿಕ ಆಕ್ರಮಣ ನಾವು ಎದುರಿಸಿದ ಸವಾಲಾಗಿದ್ದು, ಇನ್ನೂ ಮುಂದೆ ಬೇರೆ ಬೇರೆ ದೇವಸ್ಥಾನಗಳ ಮೇಲೂ ಆಕ್ರಮಣಗಳು ನಡೆಯುವ ಸಾಧ್ಯತೆಯಿದೆ. ಯಾಕೆಂದರೆ ಹುಲಿಗೆ ರಕ್ತದ ರುಚಿ ಸಿಕ್ಕಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಹೇಳಿದರು.
 
									
			
			 
 			
 
 			
					
			        							
								
																	ಅವರು ಬಿಜೆಪಿ ಉಡುಪಿ ಜಿಲ್ಲಾ ಕಚೇರಿಯ ನೂತನ ಕಟ್ಟಡದ ಭೂಮಿ ಪೂಜೆಯನ್ನು ನೆರವೇರಿಸಿದ ಬಳಿಕ ಹೇಳಿದರು. 
ವೈಚಾರಿಕವಾಗಿರುವ ವಾಮಪಂಥೀಯರು, ರಾಜಕೀಯ ಶಕ್ತಿಗಳು ಶಬರಿಮಲೆಯಲ್ಲಿ ಸ್ವಲ್ಪ ರಕ್ತದ ರುಚಿ ನೋಡಿದರು, ಈಶ ಆಶ್ರಮದಲ್ಲಿ, ಶನಿ ಶಿಂಗ್ನಾಪುರದಲ್ಲಿ ರಕ್ತದ ರುಚಿ ನೋಡಿದರು. ಧರ್ಮಸ್ಥಳದಲ್ಲೂ ಅದನ್ನೇ ಪ್ರಯತ್ನಿಸಿದ್ದಾರೆ ಎಂದರು. 
									
										
								
																	ನಡೆದಿರತಕ್ಕ ಆಕ್ರಮಣಗಳಿಗೆ ಏನು ಶಿಕ್ಷೆ ಆಗಬೇಕೋ ಅದು ಆಗಬೇಕು. ಜೊತೆಗೆ ನಡೆಯುತ್ತಿರುವ ಅಪಪ್ರಚಾರಗಳಿಗೂ ತಕ್ಕನಾದ ಶಿಕ್ಷೆಯಾಗಬೇಕು ಎಂದು ಹೇಳಿದರು.
									
											
							                     
							
							
			        							
								
																	ಇನ್ನೂ ಕುಂಭಮೇಳದ ವಿಚಾರವಾಗಿಯೂ ಸಾಕಷ್ಟು ಅಪಪ್ರಚಾರಗಳು ಬಂದರು. ನಮ್ಮ ದೇಶದಲ್ಲಿರುವ ಗಟ್ಟಿಯಾದ ನಂಬಿಕೆಯ ಹಾಗೇ  ಅಪಪ್ರಚಾರ ಮಾಡಿದಷ್ಟು ಅಲ್ಲಿಗೆ ಹೆಚ್ಚು ಜನರು ಹೋಗಿದ್ದಾರೆ ಎಂದರು.
									
			                     
							
							
			        							
								
																	ದೇಶಕ್ಕೆ, ಸಂಸ್ಕೃತಿಗೆ ಎದುರಾಗುವ ಸವಾಲುಗಳಿಗೆ ನಾವು ತಕ್ಕ ಉತ್ತರ ಕೊಡುತ್ತೇವೆ ಎಂದೂ ಹೇಳಿದರು.