Select Your Language

Notifications

webdunia
webdunia
webdunia
webdunia

ಮನ್‌ ಕಿ ಬಾತ್‌ನಲ್ಲೂ ಎಸ್‌ ಎಲ್ ಬೈರಪ್ಪರ ಕೊಡುಗೆ ನೆನೆದ ಪ್ರಧಾನಿ ಮೋದಿ

ಎಸ್ ಎಲ್ ಭೈರಪ್ಪ ಇನ್ನಿಲ್ಲ

Sampriya

ನವದೆಹಲಿ , ಭಾನುವಾರ, 28 ಸೆಪ್ಟಂಬರ್ 2025 (14:02 IST)
ನವದೆಹಲಿ: ಈಚೆಗೆ ಇಹಲೋಕ ತ್ಯಜಿಸಿದ ಲೇಖಕ ಎಸ್‌ ಎಲ್‌ ಭೈರಪ್ಪನವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡಿದ್ದಾರೆ. 

 ತಮ್ಮ 126ನೇ ಮನದ ಮಾತು ಕಾರ್ಯಕ್ರಮದಲ್ಲಿ ಭೈರಪ್ಪನವರನ್ನು ನೆನೆದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ದೇಶದ ಮಹಾನ್ ವಿಚಾರವಾದಿ, ಮಹಾನ್ ಚಿಂತಕರೊಬ್ಬರನ್ನು ಕಳೆದುಕೊಂಡಿದ್ದೇವೆ.  ನಾನು ಅವರ ಜೊತೆ ವ್ಯಕ್ತಿಗತ ಸಂಪರ್ಕ ಇಟ್ಟುಕೊಂಡಿದ್ದೆ. ಹಲವು ಸಂದರ್ಭಗಳಲ್ಲಿ ಹಲವು ವಿಚಾರಗಳ ಮಂಥನ ನಡೆಸಿದ್ದೇವೆ. ಅವರ ಕೃತಿಗಳು ಯುವ ಪೀಳಿಗೆಗೆ ದಾರಿದೀಪ. ಅವರ ಅನೇಕ ಕೃತಿಗಳು ಹಲವು ಭಾಷೆಗಳಿಗೆ ಅನುವಾದವಾಗಿವೆ. ನಮ್ಮ ಮೂಲ ಸಂಸ್ಕೃತಿ ಬಗ್ಗೆ ಹೆಮ್ಮೆ ಪಡಬೇಕು,
ಗೌರವ ತೋರಿಸಬೇಕು ಎಂಬುದನ್ನ ಅವರು ನಮಗೆ ಕಲಿಸಿಕೊಟ್ಟಿದ್ದಾರೆ. ಅವರ ಅಗಲಿಕೆಗೆ ನಾನು ಭಾವುಕ ವಿದಾಯ ತಿಳಿಸುತ್ತೇನೆ ಎಂದು ಭಾವುಕರಾದರು.

ಭೈರಪ್ಪ ಅವರ ಜೊತೆಗಿನ ಒಡನಾಟ ಪ್ರೇರಣಾದಾಯಕವಾಗಿದೆ. ಅವರ ಪುಸ್ತಕಗಳು ಪ್ರೇರಣಾದಾಯಕವಾಗಿದ್ದು, ಯುವಕರು ಹೆಚ್ಚು ಹೆಚ್ಚು ಈ ಪುಸ್ತಕಗಳನ್ನು ಓದಬೇಕೆಂದರು. 

94 ವರ್ಷದ ಡಾ.ಎಸ್.ಎಲ್ ಭೈರಪ್ಪನವರು ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರಾದೃಷ್ಟವಶಾತ್ ನಿನ್ನೆ ಮಧ್ಯಾಹ್ನ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆಗೆ ಇಡೀ ಕನ್ನಡ ನಾಡೇ ಕಂಬನಿ ಇಟ್ಟಿದೆ, ಇವರ ಸಾವಿನಿಂದ ಇಡೀ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳದಲ್ಲಿ ನಡೆಯಿತು ಚಂಡಿಕಾಯಾಗ, ಸತ್ಯದರ್ಶನ: ಹಿಂದಿದೆ ಈ ಕಾರಣ