ಧರ್ಮಸ್ಥಳ: ಕಳೆದ ಕೆಲ ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧದ ಷಡ್ಯಂತ್ರ್ಯದಲ್ಲಿ ಸತ್ಯಾಂಶ ಹೊರಬೀಳುತ್ತಿದ್ದ ಹಾಗೇ ದೇವಸ್ಥಾನದ ಆವರಣದಲ್ಲಿ ಚಂಡಿಕಾಯಾಗ ಸತ್ಯದರ್ಶನ ಸಮಾವೇಶ ನಡೆದಿದೆ. ಇದರಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡರು.
ಕಳೆದ ಕೆಲವಾರು ವರ್ಷಗಳಿಂದ ಧರ್ಮಸ್ಥಳ ಹಾಗೂ ಡಾ.ಡಿ.ವೀರೇಂದ್ರ ಹೆಗ್ಗಡೆ ವಿರುದ್ಧ ಷಡ್ಯಂತ್ರದಲ್ಲಿ ಇದೀಗ ಸತ್ಯಾಂಶ ಹೊರಬಿದ್ದಿದೆ.
ಇದಕ್ಕಾಗಿ ದೈವ-ದೇವರುಗಳಿಗೆ ತಮ್ಮ ಕೃತಜ್ಞತೆಯನ್ನು ಅರ್ಪಿಸುವ ಮತ್ತು ಸತ್ಯ, ನ್ಯಾಯದ ಜೊತೆಗೆ ನಾವು ಎಂದಿಗೂ ಇರುತ್ತೇವೆ ಎಂಬ ಸಂದೇಶವನ್ನು ಸಮಾಜಕ್ಕೆ ಸಾರುವ ಉದ್ದೇಶದಿಂದ ಅಮೃತವರ್ಷಿಣಿ ಸಭಾಂಗಣದಲ್ಲಿ ಒಂದಾಗಿಪವಿತ್ರವಾದ ಚಂಡಿಕಾ ಯಾಗ ಮತ್ತು ಸತ್ಯ ದರ್ಶನ ಸಮಾವೇಶವನ್ನು ಭಕ್ತಿ ಭಾವದಿಂದ ನಡೆಸಿದರು.
ಶ್ರೀ ಚಂಡಿಕಾಯಾಗಕ್ಕೆ ತಾಲೂಕಿನ ಎಲ್ಲಾ ಗ್ರಾಮಗಳ ವತಿಯಿಂದ ಸಮರ್ಪಿಸಲ್ಪಡುವ ಫಲ-ಪುಷ್ಪಗಳ ಸಮರ್ಪಣೆಯನ್ನು ಪೂರ್ವಾಹ್ನ ಶ್ರೀ ಕ್ಷೇತ್ರದ ಮಹಾದ್ವಾರದಿಂದ, ಅಮೃತವರ್ಷಿಣಿ ಸಭಾಂಗಣದಯಾಗ ಮಂಟಪಕ್ಕೆ ಮೆರವಣಿಗೆ ಮೂಲಕ ತರಲಾಯಿತು.