Select Your Language

Notifications

webdunia
webdunia
webdunia
webdunia

ನಳಿನ್‌ಗೆ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಬಿಜೆಪಿ ಸೇರಿದ ಅರುಣ್ ಪುತ್ತಿಲ: ಸುಗಮವಾಯಿತು ಚೌಟ ಹಾದಿ

Arun Kumar Puttila Joind BJP

Sampriya

ಮಂಗಳೂರು , ಶುಕ್ರವಾರ, 15 ಮಾರ್ಚ್ 2024 (16:26 IST)
Photo Courtesy Whatsapp
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್‌ಗೆ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲಿಗೆ ಕಾರಣರಾಗಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು. 
 
ಪುತ್ತಿಲ ಪರಿವಾರವು ಬಿಜೆಪಿ ಸೇರ್ಪಡೆಗೊಳ್ಳುವ ಮೂಲಕ ಬಿಜೆಪಿಗೆ ದಕ್ಷಿಣ ಕನ್ನಡದಲ್ಲಿ ಆನೆಬಲ ಸಿಕ್ಕಿದೆ. ಇವರನ್ನು ಮುಂಬರುವ ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳುವ ಸಾಧ್ಯತೆಯಿದೆ. ಅದಲ್ಲದೆ ಪುತ್ತಿಲ ಅವರಿಗೆ ಹೊಸ ಹೊಣೆಗಾರಿಕೆಯನ್ನು ನೀಡುತ್ತದೆ ಎಂದು ಸುದ್ದಿಯು ಹರಿದಾಡುತ್ತಿದೆ. 
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿಯಾಗಿದ್ದ ಪುತ್ತಿಲ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಶಾಸಕ ಸುನಿಲ್ ಕುಮಾರ್ ಅವರು ಹೇಳಿದರು. 
 
ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನಿರಾಕರಣೆಯಾದ ಬೆನ್ನಲ್ಲೇ ಪುತ್ತಿಲ ಬಿಜೆಪಿ ಸೇರ್ಪಡೆ ಪ್ರಕ್ರಿಯೆ ವೇಗ ಪಡೆಯಿತು. ಕೆಲ ತಿಂಗಳುಗಳಿಂದ ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆ ಹಾಗೂ ಸೂಕ್ತ ಸ್ಥಾನಮಾನದ ಕುರಿತು ಚರ್ಚೆಯಾಗುತ್ತಿತ್ತು. ಇನ್ನೂ ಬಿಜೆಪಿಯಲ್ಲಿ ಪುತ್ತಿಲಗೆ ಸೂಕ್ತ ಸ್ಥಾನಮಾನ ಸಿಗಬೇಕೆಂದು ಅವರ ಬೆಂಬಲಿಗರು ಪಟ್ಟು ಹಿಡಿದಿದ್ದರು. 
 
ಅದಲ್ಲದೆ ಲೋಕಸಭೆ ಚುನಾವಣೆಯಲ್ಲಿ ಪುತ್ತಿಲ ಸ್ಪರ್ಧೆ ಮಾಡುವುದು ಖಚಿತ ಎಂದು ಅವರ ಬೆಂಬಲಿಗರು ಪತ್ರಿಕಾಗೋಷ್ಠಿ ಹೇಳಿದ್ದು, ಬಿಜೆಪಿ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿತ್ತು. 
 
ಈ ಬಾರಿ ನಳಿನ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದರೆ, ಸ್ವಪಕ್ಷೀಯರದ್ದೇ ಬಂಡಾಯದ ಮತ್ತೊಂದು ಪ್ರತಿರೂಪವಾಗಿ ಅರುಣ್ ಪುತ್ತಿಲ ಕಣಕ್ಕಿಳಿಯುವ ಸಾಧ್ಯತೆ ಇತ್ತು. ಜೊತೆಗೆ ಸತ್ಯಜಿತ್ ಸುರತ್ಕಲ್ ಸ್ಪರ್ಧೆಗಿಳಿಯುವ ವಿಚಾರ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿತ್ತು.  ಸತೀಶ್ ಕುಂಪಲ ಜಿಲ್ಲಾಧ್ಯಕ್ಷರಾದ ಬೆನ್ನಲ್ಲೇ ತೆರೆಮರೆಯಲ್ಲಿ ಸಂಧಾನ ಪ್ರಕ್ರಿಯೆಗಳು ನಡೆದವು. ಅದರಂತೆ ಇದೀಗ ಬಿಜೆಪಿಗೆ ಪುತ್ತಿಲ ಬೆಂಬಲಿಗರು ಸೇರ್ಪಡೆಗೊಂಡರು.
 
ಹಿರಿಯ ನಾಯಕರ ಜತೆ ಮಾತುಕತೆ ನಡೆಸಿದ ಬೃಜೇಶ್ ಚೌಟ್: 
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಬ್ರಿಜೇಶ್ ಚೌಟಗೆ ಟಿಕೆಟ್ ಸಿಕ್ಕಾ ಬೆನ್ನಲ್ಲೇ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿಯಾಗಿ ಸಲಹೆಯನ್ನು ಪಡೆದರು. ಇದರೊಂದಿಗೆ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ಸೇರ್ಪಡೆ ಇದೀಗ ಬ್ರಿಜೇಶ್ ಚೌಟ ಅವರ ಹಾದಿ ಮತ್ತಷ್ಟು ಸುಗಮ ಮಾಡಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಈ ಚುನಾವಣೆ ಬಿಜೆಪಿ ಪಕ್ಷಕ್ಕಾಗಿ ಅಲ್ಲ, ಭಾರತಕ್ಕಾಗಿ: ಅಮಿತ್‌ ಶಾ ಪ್ರಚಾರ ಶುರು