Publish Date: Wed, 02 Jan 2019 (16:17 IST)
Updated Date: Wed, 02 Jan 2019 (16:19 IST)
ರಾಜಧಾನಿಯ ಕುಮಾರಕೃಪ ರಸ್ತೆ ಮತ್ತು ಚಿತ್ರಕಲಾ ಪರಿಷತ್ನ ಆವರಣದಲ್ಲಿ ಜನೇವರಿ 6 ರಂದು ಚಿತ್ರಸಂತೆ ನಡೆಯಲಿದೆ.
ಚಿತ್ರಕಲಾ ಪರಿಷತ್ ವತಿಯಿಂದ ವಾರ್ಷಿಕ ಚಿತ್ರಸಂತೆ ಜ. 6 ರಂದು ನಡೆಯಲಿದೆ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಕೃಪ ರಸ್ತೆ ಮತ್ತು ಚಿತ್ರಕಲಾ ಪರಿಷತ್ನ ಆವರಣದಲ್ಲಿ ಚಿತ್ರಸಂತೆ ನಡೆಯಲಿದೆ ಎಂದು ಹೇಳಿದರು.
ಈ ವರ್ಷದ ಆಕರ್ಷಕ ಚಿತ್ರ ಸಂತೆಯನ್ನು ಮಹಾತ್ಮಗಾಂಧಿ ಅವರಿಗೆ ಸಮರ್ಪಣೆ ಮಾಡಲಾಗಿದೆ. ಮಹಾತ್ಮ ಗಾಂಧೀಜಿ ಅವರ 150ನೇ ವರ್ಷದ ಜಯಂತಿ ನೆನಪಿಗಾಗಿ ಚಿತ್ರ ಸಂತೆಯ ಸಂಪೂರ್ಣ ಅಲಂಕಾರ, ರೂಪುರೇಷೆಗಳು ಗಾಂಧೀಜಿ ಅವರಿಗೆ ಗೌರವ ಸೂಚಿಸುವ ರೀತಿಯಲ್ಲಿರುತ್ತವೆ ಎಂದು ಮಾಹಿತಿ ನೀಡಿದರು.
ಚಿತ್ರ ಸಂತೆಯಲ್ಲಿ 1500 ಕಲಾವಿದರು ಭಾಗಿಯಾಗಿರುವ ಸಾಧ್ಯತೆಗಳಿವೆ. ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಕಲಾವಿದರು ಪಾಲ್ಗೊಂಡು ತಮ್ಮ ಕಲಾಪ್ರತಿಗಳನ್ನು ಪ್ರದರ್ಶನ ಹಾಗೂ ಮಾಟಾಟಕ್ಕೆ ಇಡಲಿದ್ದಾರೆ. ಚಿತ್ರಸಂತೆಯನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸುವರು ಎಂದು ಅವರು ಹೇಳಿದರು.