Select Your Language

Notifications

webdunia
webdunia
webdunia
webdunia

ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿ ಬಿದ್ದ ಪಿಡಿಓ ಬಂಧನ

ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿ ಬಿದ್ದ ಪಿಡಿಓ ಬಂಧನ
bangalore , ಶುಕ್ರವಾರ, 21 ಜನವರಿ 2022 (21:21 IST)
ನರೇಗಾ ಯೋಜನೆಯಡಿ ಕೊಟ್ಟಿಗೆ ಬಿಲ್ ಮಾಡಿಕೊಡಲು 5 ಸಾವಿರ ರೂ. ಲಂಚ ಕೇಳಿದ್ದ ಪಿಡಿಓನ್ನು ಲಂಚಪಡೆಯುತ್ತಿರುವ ಬಂಧಿಸಿರುವ ಘಟನೆ ತಾಲೂಕಿನ ತಟ್ಟೆಕೆರೆ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ತಟ್ಟೆಕೆರೆ ಪಿಡಿಓ ಸತೀಶ್‌ಕುಮಾರ್ ಬಂಧಿತ ಆರೋಪಿ.
ನರೇಗಾ ಯೋಜನೆಯಡಿ ನಿಲುವಾಗಿಲು ಗ್ರಾಮದ ಸುರೇಶ್ ಎಂಬುವವರು ಸಾವಿರ ರೂ. ವೆಚ್ಚದ ದನದ ಕೊಟ್ಟಿಗೆ ನಿರ್ಮಿಸಿಕೊಳ್ಳಲು ಈಗ್ಗೆ 5-6 ತಿಂಗಳ ಹಿಂದೆ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದ್ದರು, ಇತ್ತೀಚೆಗೆ ಸರಕಾರದಿಂದ ಅನುದಾನ ಬಿಡುಗಡೆಯಾಗಿತ್ತು. ಜ.18ರಂದು ಗ್ರಾ.ಪಂ.ನಲ್ಲಿ ಪಿಡಿಓರನ್ನು ಭೇಟಿಯಾದ ಪರ‍್ಯಾದುದಾರರು ಕೊಟ್ಟಿಗೆ ಬಿಲ್ ಮಾಡಿಕೊಡುವಂತೆ ಮಾಡಿದ ಮನವಿಗೆ 5 ಸಾವಿರ ರೂ ಲಂಚ ಕೇಳಿದ್ದರು. ಈ ಸಂಬಂಧ ಮೈಸೂರಿನ ಬ್ರಷ್ಟಾಚಾರ ನಿಗ್ರಹದಳಕ್ಕೆ ಪರ‍್ಯಾದುದಾರ ನಿಲುವಾಗಿಲಿನ ಸುರೇಶ್ ದೂರು ನೀಡಿದ್ದರು.
ಎ.ಸಿ.ಬಿ.ಡಿವೈ.ಎಸ್.ಪಿ.ಧರ್ಮೇಂದ್ರ ಮಾರ್ಗದರ್ಶನದಲ್ಲಿ ಗುರುವಾರ ಎಸಿಬಿ ಅಧಿಕಾರಿಗಳ ತಂಡವು ಪಿಡಿಓ ಸತೀಶ್‌ಕುಮಾರ್ 5 ಸಾವಿರ ರೂ ಲಂಚದ ಹಣ ಪಡೆಯುವಾಗಲೇ ಕಾರ್ಯಾಚರಣೆ ನಡೆಸಿ, ಲಂಚ ಪಡೆಯುತ್ತಿವ ವೇಳೆ ಹಣವನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಗ್ರಾ.ಪಂ.ನಲ್ಲಿ ತಡ ರಾತ್ರಿವರೆಗೂ ಎ.ಸಿ.ಬಿ. ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್‌ಗಳಾದ ಮೋಹನ್ ಕೃಷ್ಣ, ಚಿತ್ತರಂಜನ್, ಸಿಬ್ಬಂದಿಗಳಾದ ಪುಷ್ಪಲತಾ, ಗುರುಪ್ರಸಾದ್, ಪಾಪಣ್ಣ, ನಾಗೇಶ್, ಮಂಜುನಾಥ್, ಯೋಗೀಶ್, ಚೇತನ್ ಭಾಗಿಯಾಗಿದ್ದರೆಂದು ಡಿವೈಎಸ್‌ಪಿ ಧರ್ಮೇಂದ್ರ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡು: ಭಾನುವಾರದಂದು ರಾಜ್ಯದಾದ್ಯಂತ ‘ಸಂಪೂರ್ಣ ಕರ್ಫ್ಯೂ