Select Your Language

Notifications

webdunia
webdunia
webdunia
webdunia

ತಮಿಳುನಾಡು: ಭಾನುವಾರದಂದು ರಾಜ್ಯದಾದ್ಯಂತ ‘ಸಂಪೂರ್ಣ ಕರ್ಫ್ಯೂ

ತಮಿಳುನಾಡು: ಭಾನುವಾರದಂದು ರಾಜ್ಯದಾದ್ಯಂತ ‘ಸಂಪೂರ್ಣ ಕರ್ಫ್ಯೂ
bangalore , ಶುಕ್ರವಾರ, 21 ಜನವರಿ 2022 (21:18 IST)
ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಮುಂದಿನ ಭಾನುವಾರದಂದು ಸಂಪೂರ್ಣ ಕರ್ಫ್ಯೂ ವಿಧಿಸಲಾಗುವುದು ಎಂದು ತಮಿಳುನಾಡು ಸರ್ಕಾರ ಶುಕ್ರವಾರ ಘೋಷಿಸಿದೆ. ತಮಿಳುನಾಡು ಸರ್ಕಾರವು ಕಳೆದ ಕೂಡಾ ಭಾನುವಾರದಂದು ರಾಜ್ಯದಾದ್ಯಂತ ಸಂಪೂರ್ಣ ಕರ್ಫ್ಯೂ ವಿಧಿಸಿತ್ತು.
ತಮಿಳುನಾಡಿನಲ್ಲಿ ಹೆಚ್ಚುತ್ತಿರುವ ಕೊರೊನಾ ಮತ್ತು ಒಮೆಗಾ ವೈರಸ್‌ನ ಹಿನ್ನಲೆಯಿಂದ, ರೋಗದ ಹರಡುವಿಕೆಯನ್ನು ನಿಯಂತ್ರಿಸಲು ಜನವರಿ 23 ರ ಭಾನುವಾರದಂದು ಸಂಪೂರ್ಣ ಕರ್ಫ್ಯೂ ವಿಧಿಸಲಾಗುತ್ತದೆ ಎಂದು ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಹೇಳಿದೆ.
ಭಾನುವಾರದ ಪೂರ್ಣ ಕರ್ಫ್ಯೂ ದಿನದಂದು ಕಳೆದ ಭಾನುವಾರ (16-1-2022) ಪೂರ್ಣ ಕರ್ಫ್ಯೂ ಸಮಯದಲ್ಲಿ ಜಾರಿಗೊಳಿಸಲಾದ ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅನುಮತಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಅಂದು ವಿಧಿಸಿದ್ದ ಚಟುವಟಿಕೆಗಳ ಮೇಲಿನ ನಿರ್ಬಂಧಗಳು ಈ ವಾರ ಕೂಡಾ ಮುಂದುವರಿಯಲಿವೆ ಎಂದು ಅದು ಹೇಳಿದೆ.
ಅಲ್ಲದೆ, ಬೇರೆ ರಾಜ್ಯದಿಂದ ತಮಿಳುನಾಡಿಗೆ ತೆರಳುವ ಪ್ರಯಾಣಿಕರ ಹಿತದೃಷ್ಟಿಯಿಂದ, ಸಾಮಾನ್ಯ ಆಟೋಗಳು, ಬುಕ್ ಮಾಡಿರುವ ಬಾಡಿಗೆ ಕಾರುಗಳು ಚೆನ್ನೈ ಸೆಂಟ್ರಲ್, ಎಗ್ಮೋರ್ ರೈಲು ನಿಲ್ದಾಣ ಮತ್ತು ಕೊಯಮತ್ತೂರು ಬಸ್ ನಿಲ್ದಾಣದಂತಹ ಸ್ಥಳಗಳಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ.
ಇದು ಜಿಲ್ಲೆಯ ರೈಲು ನಿಲ್ದಾಣಗಳು ಮತ್ತು ಉಪನಗರ ಬಸ್ ನಿಲ್ದಾಣಗಳಿಗೆ ಮಾತ್ರ ಅನ್ವಯಿಸುತ್ತದೆ.
ಕೊರೊನಾ ಸೋಂಕಿನಿಂದ ಜನರನ್ನು ರಕ್ಷಿಸಲು ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳಿಗೆ ತಮ್ಮ ಸಂಪೂರ್ಣ ಸಹಕಾರ ನೀಡುವಂತೆ ಮುಖ್ಯಮಂತ್ರಿ ಎಂ.ಕೆ. ಸ್ವಾಲಿನ್‌ ಕೋರಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಇಎಸ್‌ಐ ನೇಮಕಾತಿಯಲ್ಲಿ ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಹೊಸ ತಿದ್ದುಪಡಿ ಅಧಿಸೂಚನೆ