Publish Date: Fri, 10 Jul 2020 (16:02 IST)
Updated Date: Fri, 10 Jul 2020 (16:04 IST)
ಲಕ್ಷಾಂತರ ರೂಪಾಯಿಗಳನ್ನು ಪಡೆದು ಬೇಕಾದ ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನವಾಗಿದೆ.
ಕಲಬುರಗಿಯ ಏಷಿಯನ್ ಮಾಲ್ ನಲ್ಲಿನ ಬಟ್ಟೆ ಶಾಪ್ ಮೇಲೆ ದಾಳಿ ನಡೆಸಿ ಮಾಲೀಕ ಮಹ್ಮದ್ ಖಾನ್ ಯೂಸುಫಖಾನ್ ಎಂಬಾತನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎಸ್ ಎಸ್ ಎಲ್ ಸಿ, ಪಿಯುಸಿ, ಡಿಪ್ಲೋಮಾ, ಬಿಇ, ಬಿ.ಟೆಕ್,ಎಂಬಿಎ, ಎಂಸಿಎ, ಎಂಟೆಕ್, ಪದವಿ ಪ್ರಮಾಣ ಪತ್ರಗಳನ್ನು ನೇರವಾಗಿ ಯಾವುದೇ ಶಿಕ್ಷಣ ನೀಡದೇ ನಕಲಿ ಅಂಕಪಟ್ಟಿ ತಯಾರಿಸಿ ಕೊಡುತ್ತಿದ್ದನು.
ಪದವಿವರೆಗೆ 50 ರಿಂದ 60 ಸಾವಿರ ರೂ., ಬಿಇ, ಬಿಟೆಕ್ ಮೊದಲಾದವುಗಳಿಗೆ 3 ರಿಂದ 3.50 ಲಕ್ಷ ರೂ. ಪಡೆದುಕೊಂಡು ನಕಲಿ ಅಂಕಪಟ್ಟಿ ಕೊಡುತ್ತಿದ್ದ ಎನ್ನಲಾಗಿದೆ.