Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಬಿಬಿಎಂಪಿಯಿಂದ ಸೂರ್ಯ ದೇವರ ಆರಾಧನೆಗೆ ವ್ಯವಸ್ಥೆ

Arrangement
bangalore , ಗುರುವಾರ, 16 ನವೆಂಬರ್ 2023 (20:20 IST)
ಹಲಸೂರು ಕೆರೆಯಲ್ಲಿ  ದೇವರ ಆರಾಧನೆಗೆ ಬಿಬಿಎಂಪಿ ವ್ಯವಸ್ಥೆ ಮಾಡಿದೆ.ಹಲಸೂರು ಕೆರೆಯಲ್ಲಿ ಛ‌ಠ್ ಪೂಜೆ( ಸೂರ್ಯ ದೇವರ ಆರಾಧನೆ)ಗೆ ವ್ಯವಸ್ಥೆ ಮಾಡಲಾಗಿದೆ.ನವೆಂಬರ್ 19 ಮತ್ತು ನವೆಂಬರ್  2೦ ರಂದು “ಛ‌ಠ್ ಪೂಜೆ" - ಸೂರ್ಯದೇವರ ಆರಾಧನೆ ಮಾಡಲಾಗುತ್ತೆ.ಹಲಸೂರು ಕೆರೆಯಲ್ಲಿ ಗಣಪತಿ ವಿಸರ್ಜನೆ ಮಾಡಲು ಕಲ್ಯಾಣಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.
 
ಸದರಿ “ಛಠ್ ಪೂಜೆ"ಯಲ್ಲಿ ಸಾರ್ವಜನಿಕರು ಭಾಗವಹಿಸಿದ್ರು.ಹಲಸೂರು ಕೆರೆಯ ಉತ್ತರ ದಿಕ್ಕಿನಲ್ಲಿರುವ, ಅಣ್ಣಸ್ವಾಮಿ ಮೊದಲಿಯಾರ್ ರಸ್ತೆಯ (ಕಾರಾ ಕೆಫೆ ರೆಸ್ಟೋರೆಂಟ್ ಮುಂಭಾಗದ) ಮುಖ್ಯ ದ್ವಾರದ ಮೂಲಕವೇ ಬಂದು ಹಲಸೂರು ಕೆರೆಯ ಕಲ್ಯಾಣಿಯಲ್ಲಿ ಮಾತ್ರವೇ "ಛಠ್, ಪೂಜೆಯನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.ಸದರಿ ಪೂಜೆಯಲ್ಲಿ ಭಾಗವಹಿಸುವ ಸಾರ್ವಜನಿಕರು ಯಾವುದೇ ರೀತಿಯ ಪ್ಲಾಸ್ಟಿಕ್ ಪೇಪರ್ ಮುಂತಾದ ವಿಷಯುಕ್ತ ವಸ್ತುಗಳನ್ನು ಕೆರೆಯ ಅಂಗಳಕ್ಕೆ ತರಬಾರದೆಂದು ಸೂಚನೆ ನೀಡಲಾಗಿದೆ.ಹಲಸೂರು ಕೆರೆಯ ಬೇರೆ ದಿಕ್ಕಿನ ದ್ವಾರಗಳು ಮುಚ್ಚಿರುತ್ತದೆ . ಪೂರ್ವ ವಲಯದ ಬೇರೆ ಯಾವುದೇ ಸ್ಥಳದಲ್ಲಿ “ಛ‌ಠ್ ಪೂಜೆಗೆ ವ್ಯವಸ್ಥೆ ಕಲ್ಪಿಸಿರುವುದಿಲ್ಲ.ಪೂರ್ವ ವಲಯ ಆಯುಕ್ತರಾದ  ಶ್ರೀಮತಿ ಆರ್.ಸ್ನೇಹಲ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭಾ ಚುನಾವಣೆ ವೇಳೆ BJP,JDS ಖಾಲಿ-ಪ್ರಿಯಾಂಕ್ ಖರ್ಗೆ