Webdunia - Bharat's app for daily news and videos

Install App

April 1st: ಇಂದಿನಿಂದ ಹಾಲು, ವಿದ್ಯುತ್, ಕಸವೂ ದುಬಾರಿ

Krishnaveni K
ಮಂಗಳವಾರ, 1 ಏಪ್ರಿಲ್ 2025 (09:15 IST)
ಬೆಂಗಳೂರು: ಏಪ್ರಿಲ್ 1 ರಿಂದ ರಾಜ್ಯದ ಜನರ ಕಿಸೆಗೆ ವಿವಿಧ ರೂಪದಲ್ಲಿ ಹೆಚ್ಚುವರಿ ಕತ್ತರಿ ಬೀಳಲಿದೆ. ಇಂದಿನಿಂದ ಹಾಲು, ಮೊಸರು, ವಿದ್ಯುತ್, ಕಸವೂ ದುಬಾರಿಯಾಗಲಿದೆ.

ನಂದಿನಿ ಹಾಲು, ಮೊಸರು ದರ ಏರಿಕೆ
ರಾಜ್ಯ ಸರ್ಕಾರ ಕಳೆದ ವಾರವಷ್ಟೇ ನಂದಿನಿ ಹಾಲು ಮತ್ತು ಮೊಸರಿಗೆ ಪ್ರತೀ ಲೀಟರ್ ಗೆ 4 ರೂ. ಏರಿಕೆ ಮಾಡಿ ಘೋಷಣೆ ಮಾಡಿತ್ತು. ಅದು ಇಂದಿನಿಂದ ಜಾರಿಗೆ ಬರಲಿದೆ. ಇಂದಿನಿಂದ ನೀಲಿ ಪ್ಯಾಕೆಟ್ ಪ್ರತೀ ಲೀಟರ್ ಹಾಲಿನ ಬೆಲೆ 56 ರೂ. ಆಗಲಿದೆ. ಇನ್ನು ಮೊಸರಿಗೆ 54 ರೂ. ಆಗಲಿದೆ.

ವಿದ್ಯುತ್ ದರ ಏರಿಕೆ
ಪ್ರತೀ ತಿಂಗಳು 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುವವರಿಗೆ ಇಂದಿನಿಂದ ವಿದ್ಯುತ್ ದರವೂ ಹೆಚ್ಚಳವಾಗಲಿದೆ. ಪ್ರತೀ ಯೂನಿಟ್ ಗೆ 36 ಪೈಸೆ ವಿದ್ಯುತ್ ದರ ಏರಿಕೆ ಮಾಡಲಾಗಿದ್ದು  ಅದು ಇಂದಿನಿಂದ ಜಾರಿಗೆ ಬರಲಿದೆ. ಉಚಿತ ಯೋಜನೆಯ ಫಲಾನುಭವಿಗಳಿಗೆ ಎಂದಿನಂತೆ ದರವಿರಲಿದೆ.

ಕಸಕ್ಕೂ ಟ್ಯಾಕ್ಸ್
ಇದೀಗ ರಾಜ್ಯ ಸರ್ಕಾರ ಬೆಂಗಳೂರಿಗರಿಗೆ ಕಸಕ್ಕೂ ಟ್ಯಾಕ್ಸ್ ವಿಧಿಸುವ ಮೂಲಕ ಜೇಬಿಗೆ ಕತ್ತರಿ ಹಾಕಿದೆ. ಇಂದಿನಿಂದ ನಿಮ್ಮ ಮನೆ ತೆರಿಗೆ, ಆಸ್ತಿ ತೆರಿಗೆಯಂತೆ ಕಸಕ್ಕೂ ಟ್ಯಾಕ್ಸ್ ನೀಡಬೇಕಾಗುತ್ತದೆ. ಇದು ಆಸ್ತಿ ತೆರಿಗೆಯ ಜೊತೆ ಪಾವತಿ ಮಾಡಬೇಕಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಲ್ವಡಿ ಕೃಷ್ಣರಾಜ ಒಡೆಯರ್ ನಾಡಿಗೆ ನೀಡಿದ ಕೊಡುಗೆಗಳ ಪಟ್ಟಿ ಇಲ್ಲಿದೆ ನೋಡಿ

ನಾಲ್ವಡಿ ಒಡೆಯರ್ ಗಿಂತ ನೀವು ಗ್ರೇಟ್ ಅಂತೆ ಎಂದು ಕೇಳಿದ್ದಕ್ಕೆ ಸಿದ್ದರಾಮಯ್ಯ ಉತ್ತರ ನೋಡಿ

ಸಿದ್ದರಾಮಯ್ಯ ಒಡೆಯರ್ ಗಿಂತ ಗ್ರೇಟ್ ಎಂದಿದ್ದ ಯತೀಂದ್ರ: ಯದುವೀರ್ ಒಡೆಯರ್ ಉತ್ತರ ನೋಡಿ

ರಸಗೊಬ್ಬರ ರೈತರಿಗೆ ಸಿಗಲು ಸರ್ಕಾರ ವ್ಯವಸ್ಥೆಯೇ ಮಾಡಿಲ್ಲ: ಬಿವೈ ವಿಜಯೇಂದ್ರ

Arecanut price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ
Show comments