Webdunia - Bharat's app for daily news and videos

Install App

ರಾಜ್ಯದಲ್ಲಿ 30 ಸಾವಿರ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್ ಷಿಪ್  ಗುರಿ

Webdunia
ಸೋಮವಾರ, 4 ಅಕ್ಟೋಬರ್ 2021 (20:14 IST)
ಮೈಸೂರು: ಉದ್ದಿಮೆಗಳ ಬೇಡಿಕೆಯನ್ನು ಪೂರೈಸುವುದಕ್ಕಾಗಿ ರಾಜ್ಯದಲ್ಲಿ 30,000 ಅಭ್ಯರ್ಥಿಗಳು ಅಪ್ರೆಂಟಿಸ್ ಷಿಪ್ ನಲ್ಲಿ ತೊಡಗುವಂತೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು. 
 
ಭಾರತದ ತರಬೇತಿ ಮಹಾನಿರ್ದೇಶನಾಲಯದ (ಡಿಒಟಿ) ನೇತೃತ್ವದಲ್ಲಿ  ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ವತಿಯಿಂದ ಎಸ್ಸೆಸ್ಸೆಲ್ಸಿ/ಐಟಿಐ ಪಾಸಾದ ಆಕಾಂಕ್ಷಿಗಳಿಗಾಗಿ ಸೋಮವಾರ ಏರ್ಪಡಿಸಿದ್ದ ‘ಅಪ್ರೆಂಟಿಷ್ ಷಿಪ್ ಮೇಳ (ಶಿಶಿಕ್ಷು ಮೇಳ)ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 
 
2020-21ನೇ ಸಾಲಿನಲ್ಲಿ ಒಟ್ಟು 249 ಉದ್ದಿಮೆಗಳಲ್ಲಿ (ಸರ್ಕಾರಿ ಸ್ವಾಮ್ಯದ 56+ ಖಾಸಗಿ ಉದ್ದಿಮೆಗಳು 193) 7,091 ಅಭ್ಯರ್ಥಿಗಳು ಅಪ್ರೆಂಟಿಷ್ ಷಿಪ್ ತರಬೇತಿ ಪಡೆಯುತ್ತಿದ್ದಾರೆ. 2021-22ನೇ ಸಾಲಿಗೆ ಸೆ.30ರ ಅಂಕಿ-ಅಂಶದ ಪ್ರಕಾರ 6,856 ಅಭ್ಯರ್ಥಿಗಳು ಮತ್ತು 383 ಉದ್ದಿಮೆಗಳು ನೋಂದಣಿ ಮಾಡಿಸಿಕೊಂಡಿವೆ. ಹೀಗಾಗಿ, ಅಪ್ರೆಂಟಿಸ್ ಪಿಷ್ ಗಳ ಸಂಖ್ಯೆ ಇನ್ನೂ ಸಾಕಷ್ಟು ಹೆಚ್ಚಬೇಕೆಂಬುದು ಗೊತ್ತಾಗುತ್ತದೆ ಎಂದು ವಿವರಿಸಿದರು. 
 
ದಕ್ಷಿಣ ಕೊರಿಯಾದಲ್ಲಿ ಕೌಶಲ್ಯ ಹೊಂದಿದವರ ಸಂಖ್ಯೆ ಶೇ 96ರಷ್ಟಿದ್ದರೆ, ಜರ್ಮನಿ, ಜಪಾನ್ ನಲ್ಲಿ ಶೇ 80ಕ್ಕಿಂತ ಹೆಚ್ಚು, ಅಮೆರಿಕಾದಲ್ಲಿ ಶೇ 56ರಷ್ಟು ಹಾಗೂ ಯೂರೋಪ್ ನಲ್ಲಿ ಶೇ 60ರಷ್ಟಿದೆ. ಆದರೆ ಭಾರತದಲ್ಲಿ ಇದು ಶೇ 5ರಷ್ಟು ಮಾತ್ರ ಇದೆ. ಭಾರತವು ಜಗತ್ತಿನ ಉತ್ಪಾದನಾ ನೆಲೆ ಆಗಬೇಕೆಂಬ ಗುರಿ ಸಾಧಿಸಬೇಕಾದರೆ ಕೌಶಲ ಹೊಂದಿದವರ ಸಂಖ್ಯೆ ಸಾಕಷ್ಟು ಹೆಚ್ಚಾಗಬೇಕು ಎಂದು ಅಶ್ವತ್ಥ ನಾರಾಯಣ ಹೇಳಿದರು. 
 
ಅಪ್ರೆಂಟಿಷ್ ಷಿಪ್ ಮೇಳವು ಕಿರಿಯ ವಯಸ್ಸಿನಲ್ಲಿ ಹೆಚ್ಚು ಕೌಶಲ್ಯ ಪಡೆಯಲು ಸಹಕಾರಿ. ಇದು ಅಭ್ಯರ್ಥಿಗಳಿಗೆ ಆಧುನಿಕ ಯಂತ್ರೋಪಕರಣಗಳ ಬಗ್ಗೆ ನೇರವಾಗಿ ಪರಿಚಯ ಮಾಡಿಕೊಡುತ್ತದೆ. ಅಪ್ರೆಂಟಿಸ್ ಷಿಪ್ ನಿಂದಾಗಿ ಕೇಂದ್ರ ಹಾಗೂ ಸರ್ಕಾರಿ ಸ್ವಾಮ್ಯದ ಉದ್ಯಮಗಳಲ್ಲಿ ಮತ್ತು ಖಾಸಗಿ ವಲಯಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತವೆ ಎಂದರು. 
 
ಇದರಿಂದ ಉದ್ದಿಮೆಗಳಿಗೂ ಆಧುನಿಕ ತಂತ್ರಜ್ಞಾನದ ಬಗ್ಗೆ ತಿಳಿವಳಿಕೆಯುಳ್ಳ ಮಾನವ ಸಂಪನ್ಮೂಲವನ್ನು ಪಡೆಯಲು ಸಾಧ್ಯವಾಗುತ್ತದೆ. ಜೊತೆಗೆ ಉತ್ಪಾದಕತೆ ಹೆಚ್ಚಿಸಲು ಇದು ಸಹಕಾರಿ. ರಾಷ್ಟ್ರೀಯ ಅಪ್ರೆಂಟಿಷ್ ಷಿಪ್ ಉತ್ತೇಜನಾ ಕಾರ್ಯಕ್ರಮ (ಎನ್.ಎ.ಪಿ.ಎಸ್.) ಮತ್ತು ಕರ್ನಾಟಕ ಅಪ್ರೆಂಟಿಷ್ ಷಿಪ್ ತರಬೇತಿ ಕಾರ್ಯಕ್ರಮ (ಕೆ.ಎ.ಟಿ.ಎಸ್.) ತಲಾ 1,500 ರೂಪಾಯಿಯಂತೆ ಒಟ್ಟು 3,000 ರೂಪಾಯಿ ಸ್ಟೈಪೆಂಡ್ ಕೊಡಲಾಗುತ್ತದೆ. ಇದರ ಪ್ರಯೋಜವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು. 
 
270 ಸರ್ಕಾರಿ ಮತ್ತು 196 ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ 39,876 ಸೀಟುಗಳಿಗೆ ಆನ್ ಲೈನ್ ಮೂಲಕ ಮೂರು ಸುತ್ತುಗಳಲ್ಲಿ ಪ್ರವೇಶ ಪ್ರಕ್ರಿಯೆ ನಡೆಸಲಾಗಿದೆ. ಉಳಿದ ಸ್ಥಾನಗಳನ್ನು ಭರ್ತಿ ಮಾಡಲು ಪ್ರಕ್ರಿಯೆ ನಡೆದಿದೆ. 
 
ಟಾಟಾ ಕಂಪನಿ ಸಹಯೋಗದಲ್ಲಿ ಮೇಲ್ದರ್ಜೆಗೇರಿಸಿರುವ 150 ಐ.ಟಿ.ಐ.ಗಳಲ್ಲಿ ರಾಜ್ಯ ಔದ್ಯೋಗಿಕ ತರಬೇತಿ ಪರಿಷತ್ (ಎಸ್.ಸಿ.ವಿ.ಟಿ.) 06 ವೃತ್ತಿಗಳನ್ನು ಆರಂಭಿಸಲು ಅಧಿಸೂಚನೆ ಹೊರಡಿಸಲಾಗಿದೆ. ಪ್ರತಿ ಸಂಸ್ಥೆಯಲ್ಲಿ 2 ವೃತ್ತಿಗಳನ್ನು ಆರಂಭಿಸಲು ಅವಕಾಶವಿದ್ದು, ಒಟ್ಟು 6,740 ಸೀಟುಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ತಿಳಿಸಿದರು. 
 
ಡಿಒಟಿ ನೇತೃತ್ವದಲ್ಲಿ  ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೋಮವಾರ (ಡಿಒಟಿ) ಅಪ್ರೆಂಟಿಷ್ ಷಿಪ್ ಮೇಳ ಏರ್ಪಡಿಸಲಾಗಿತ್ತು. 
 
ಸಂವಾದ ಕಾರ್ಯಕ್ರಮ: ಕಾರ್ಯಕ್ರಮದ ಅಂಗವಾಗಿ ಉದ್ಯಮಿಗಳೊಂದಿಗೆ ಸಂವಾದ ಏರ್ಪಡಿಸಲಾಗಿತ್ತು. ರಾಜ್ಯದಲ್ಲಿ ಸುಮಾರು 7 ಲಕ್ಷ ಸಣ್ಣ ಕೈಗಾರಿಕಾ ಘಟಕಗಳಿದ್ದು ಜಿ.ಡಿ.ಪಿ.ಗೆ ಹೆಚ್ಚಿನ ಕೊಡುಗೆ ಕೊಡುತ್ತಿವೆ. ಸಣ್ಣ ಕೈಗಾರಿಕೆಗಳಲ್ಲಿ ಕೆಲಸಗಳಿಗೆ ಕೊರತೆಯಿಲ್ಲ. ಐ.ಟಿ.ಐ. ಮಾಡಿದ ಫಿಟ್ಟರ್, ಟರ್ನರ್ ಇತ್ಯಾದಿ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈಗಲೂ ಬೇಕಾಗಿದ್ದಾರೆ. ಆದರೆ ಐ.ಟಿ.ಐ., ಡಿಪ್ಲೊಮಾ ಮಾಡಿದವರೆಲ್ಲಾ ಎಂಜಿನಿಯರಿಂಗ್ ಮಾಡುತ್ತಿರುವುದರಿಂದ ಸಣ್ಣ ಕೈಗಾರಿಕೆಗಳಿಗೆ ಬೇಕಾದ ಉದ್ಯೋಗಿಗಳೇ ಸಿಗುತ್ತಿಲ್ಲ ಎಂದು ಉದ್ಯಮಿಯೊಬ್ಬರು ಹೇಳಿದರು. 
 
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಣ್ಣ ಕೈಗಾರಿಕೆಗಳು ತಮಗೆ ಬೇಕಿರುವ ಮಾನವ ಸಂಪನ್ಮೂಲದ ಅಗತ್ಯಗಳನ್ನು ‘ಸ್ಕಿಲ್ ಕನೆಕ್ಟ್’ ಆನ್ ಲೈನ್ ವೇದಿಕೆಗೆ ಅಪ್ ಲೋಡ್ ಮಾಡುವಂತೆ ತಿಳಿಸಿದರು. ‘ಕ್ಯಾಂಪಸ್ ಕನೆಕ್ಟ್’ ವೇದಿಕೆಯನ್ನು ಬಳಸಿಕೊಳ್ಳುವಂತೆಯೂ ಸಲಹೆ ನೀಡಿದರು. ಸಣ್ಣ ಕೈಗಾರಿಕೆಗಳಿಗೆ ಉದ್ಯೋಗಿಗಳನ್ನು ಒದಗಿಸುವ ತಾವು ಕ್ರಮ ವಹಿಸುವುದಾಗಿಯೂ ತಿಳಿಸಿದರು.
‘ಹ್ಯಾಂಡ್ಸ್ ಆನ್- ಟ್ರೈನಿಂಗ್’ ಅನ್ನು ಕೈಗಾರಿಕಾ ತರಬೇತಿ ಕೋರ್ಸ್ ನ ಭಾಗವಹಿಸಬೇಕೆಂದು ನೀಡಿದ ಸಲಹೆಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಜೊತೆಗೆ ಐಟಿಐ ಹಾಗೂ ಶಾಲೆಗಳು ‘ಹಬ್ ಅಂಡ್ ಸ್ಪೋಕ್’ ಮಾದರಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಗುವುದು. ಐಟಿಐ, ಪಾಲಿಟೆಕ್ನಿಕ್ ಮತ್ತು ಜಿಟಿಟಿಸಿ ಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆಯನ್ನು ಹೆಚ್ಚಿಸಲು ಒತ್ತು ಕೊಡಲಾಗುವುದು ಎಂದರು. 
 
ಶಾಸಕ ತನ್ವೀರ್ ಸೇಠ್, ಮೈಸೂರು ವಾಣಿಜ್ಯೋದ್ಯಮ ಸಂಘದ ಸುರೇಶ್ ಜೈನ್, ರಫೀಕ್ ಅಹಮ್ಮದ್, ಹೇಮಂತ್ ಗೌಡ ಮತ್ತಿತರರು ಇದ್ದರು.
education

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments