ಮೇಲುಕೋಟೆ ಚೆಲುವನಾರಾಯಣನಿಗೆ ಮಾಡುವ ದೀವಟಿಗೆ ಸಲಾಂ ವಿವಾದ ಹಿನ್ನೆಲೆ ದೇವಾಲಯದ ಆಡಳಿತ ಮಂಡಳಿ ಬಳಿ ಜಿಲ್ಲಾಡಳಿತ ವರದಿ ಕೇಳಿದೆ . ದೇವಾಲಯದ EO ಹಾಗೂ ಪಾಂಡವಪುರ ಉಪವಿಭಾಗಾಧಿಕಾರಿಗಳಿಗೆ ಮಂಡ್ಯ ಡಿಸಿ ಅಶ್ವಥಿಯವರಿಂದ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ದೀವಟಿಗೆ ಸಲಾಂ ಎಂಬ ಹೆಸರಿನಲ್ಲಿ ದೇಗುಲದಲ್ಲಿ ಆರತಿ ನಡೆಯುತ್ತಿದ್ದು, ಸಲಾಂ ಎಂಬ ಹೆಸರನ್ನ ಬದಲಾಯಿಸುವಂತೆ ಜಿಲ್ಲಾ ಧಾರ್ಮಿಕ ಪರಿಷತ್ ಮನವಿ ಸಲ್ಲಿಸಿತ್ತು. ಇನ್ನು ಸಂಜೆ ವೇಳೆ ನಡೆಯುತ್ತಿದ್ದ ದೀವಟಿಗೆ ಸಲಾಂ ಕೈ ಬಿಡುವಂತೆ ಅಭಿಪ್ರಾಯ ತಿಳಿಸಿರುವ ದೇಗುಲದ ಸ್ಥಾನಿಕರು, ಮುಸ್ಲಿಂ ದಾಳಿಕೋರರಿಂದ ಸಂಧ್ಯಾರತಿ ಬದಲಿಗೆ ದೀವಟಿಗೆ ಸಲಾಂ ಎಂಬ ಪದ ಬಂದಿದೆ. ಸಲಾಂ ಪದ ತೆಗೆದು ಸಂಧ್ಯಾರತಿ ಎಂದು ಹೆಸರಿಡುವಂತೆ ಸ್ಥಾನಿಕರು ಅಭಿಪ್ರಾಯ ಪಟ್ಟಿದ್ದಾರೆ.