134 ದಿನಗಳ ಹೋರಾಡಿಯೂ ಮಗಳ ಬಿಟ್ಟು ಹೊರಟೇ ಹೋದ ಅಪೂರ್ವ: ಮನಕಲಕುವ ಘಟನೆ

Krishnaveni K
ಬುಧವಾರ, 8 ಅಕ್ಟೋಬರ್ 2025 (16:59 IST)
ಪುತ್ತೂರು: ಕೆಲವು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಮುರ ಬಳಿ ನಡೆದ ಖಾಸಗಿ ಬಸ್ ಮತ್ತು ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಅಪೂರ್ವ ಎಂಬ 30 ವರ್ಷದ ಗೃಹಿಣಿ ಅಪೂರ್ವ ಸತತ 134 ದಿನಗಳ ಹೋರಾಟದ ಬಳಿಕ ಇಹಲೋಕ ತ್ಯಜಿಸಿದ್ದಾರೆ. ಆಕೆಯ ಸಾವು ಎಂಥವರ ಮನಸ್ಸೂ ಮರುಗುವಂತೆ ಮಾಡುತ್ತದೆ.

ತಮ್ಮ ತಂದೆ ಮತ್ತು ಪುಟಾಣಿ ಮಗಳ ಜೊತೆ ಕಾರಿನಲ್ಲಿ ತೆರಳುತ್ತಿದ್ದ ಅಪೂರ್ವ ನಿನ್ನೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಪಘಾತವಾದಾಗ ತಂದೆಗೆ ಗಾಯಗಳಾಗಿದ್ದರೆ ಮಗಳು ಪವಾಡ ಸದೃಶಳಾಗಿ ಪಾರಾಗಿದ್ದಳು. ಆದರೆ ಅಪೂರ್ವಗೆ ತಲೆಗೇ ಗಂಭೀರ ಗಾಯವಾಗಿತ್ತು.

ಆಕೆಯ ಪತಿ ಆಶಿಶ್ ಸಾರಡ್ಕ ಫೇಸ್ ಬುಕ್ ಮುಖಾಂತರ ತನ್ನ ಪತ್ನಿಯ ಪ್ರತಿ ದಿನದ ಪರಿಸ್ಥಿತಿ ಬಗ್ಗೆ ದುಃಖದಿಂದಲೇ ಬರೆಯುತ್ತಿದ್ದರು. ನನ್ನ ಪತ್ನಿಯ ಉಳಿವಿಗಾಗಿ ಪ್ರಾರ್ಥನೆ ಮಾಡಿ ಎಂದು ಕೇಳುತ್ತಿದ್ದರು. ದುಡ್ಡು ಎಷ್ಟೇ ಖರ್ಚಾದರೂ ತೊಂದರೆಯಿಲ್ಲ. ನನ್ನ ಪತ್ನಿಯನ್ನು ಉಳಿಸಿಕೊಡಿ ಎಂದು ವೈದ್ಯರಿಗೂ ಕೇಳಿಕೊಂಡಿದ್ದರು. ತಮ್ಮ ಕೆಲಸ-ಕಾರ್ಯವನ್ನೆಲ್ಲಾ ಬಿಟ್ಟು ಇಷ್ಟೂ ದಿನ ಪತ್ನಿಯ ಸೇವೆ ಮಾಡುತ್ತಾ ಆಕೆ ಮತ್ತೆ ಬದುಕಿ ಬರುತ್ತಾಳೆಂಬ ವಿಶ್ವಾಸದಲ್ಲಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದ ಆಶಿಶ್ ಸಾರಡ್ಕ, ಅಪೂರ್ವ ಮತ್ತು ಮುದ್ದಾದ ಮಗಳ ಫೋಟೋ, ವಿಡಿಯೋ ನೋಡುವಾಗ ಕರುಳು ಚುರುಕ್ ಎನ್ನದೇ ಇರಬಹುದು.

ಅಪೂರ್ವ ಬದುಕಿ ಬರಬೇಕೆಂದು ಆಶಿಶ್ ಸಾರಡ್ಕ ಮಾಡದ ಪೂಜೆಗಳಿಲ್ಲ, ನಂಬದ ದೇವರಿಲ್ಲ. ಆದರೆ ಅಪಘಾತವಾದಾಗಿನಿಂದ ಮಾತನಾಡುವ ಸ್ಥಿತಿಯಲ್ಲೂ ಇಲ್ಲದ ಪತ್ನಿಯನ್ನು ಅವರು ನೋಡಿಕೊಂಡಿದ್ದು ಎಲ್ಲರಿಗೂ ಮಾದರಿ.

ಆದರೆ ನಿನ್ನೆ ಎಲ್ಲಾ ಪ್ರಯತ್ನಗಳೂ ನಿಷ್ಫಲವಾಗಿದ್ದು, ಪುಟ್ಟ ಕಂದಮ್ಮ ಮತ್ತು ಜೀವಕ್ಕಿಂತ ಹೆಚ್ಚು ಪ್ರೀತಿಸುವ ಪತಿ, ಮನೆಯವರನ್ನು ಬಿಟ್ಟು ಅಪೂರ್ವ ಈ ಲೋಕವನ್ನೇ ಬಿಟ್ಟು ನಡೆದಿದ್ದಾರೆ. ಇದೀಗ ಸಾವಿನ ಬಳಿಕವೂ ಪತ್ನಿಗೆ ಅರ್ಥಪೂರ್ಣವಾಗಿ ವಿದಾಯ ನೀಡಲು ಆಶಿಶ್ ಮುಂದಾಗಿದ್ದಾರೆ. ಇದಕ್ಕಾಗಿ ಆಕೆ ಹೆಚ್ಚು ಇಷ್ಟಪಡುತ್ತಿದ್ದ, ಆಡಿ ಬೆಳೆದ ಪುತ್ತೂರು ಸಮೀಪದ ಅಂಡೇಪುಣಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ. ಆಕೆಗೆ ಯಾರೂ ಮತ್ತೆ ಹುಟ್ಟಿ ಬಾ ಎನ್ನಬೇಡಿ, ಆಕೆಗೆ ಮೋಕ್ಷ ಸಿಗಲಿ ಎಂದು ಪತಿ ಆಶಿಶ್ ಸಾರಡ್ಕ ಬೇಸರದಿಂದಲೇ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗೃಹಲಕ್ಷ್ಮಿ ಯೋಜನೆಯಲ್ಲೂ ಹಗರಣವೇ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ತಪ್ಪು ಲೆಕ್ಕ ಕೊಟ್ಟ ಆರೋಪ

ಬಗರ್ ಹುಕುಂ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದರೆ ಶಿಕ್ಷೆ: ಸಚಿವ ಕೃಷ್ಣಭೈರೇಗೌಡ

ಡಿಕೆ ಶಿವಕುಮಾರ್, ವಿಜಯೇಂದ್ರ ಬಗ್ಗೆ ಬೆಚ್ಚಿಬೀಳುವ ಬಾಂಬ್ ಸಿಡಿಸಿದ ಬಸನಗೌಡ ಪಾಟೀಲ್ ಯತ್ನಾಳ್

ಬ್ರೇಕ್ ಫಾಸ್ಟ್, ಡಿನ್ನರ್ ಮೀಟಿಂಗ್ ನಿಂದಲೇ ರಾಜ್ಯ ಕುಲಗೆಟ್ಟಿದೆ: ಬಿವೈ ವಿಜಯೇಂದ್ರ

ವೋಟ್ ಚೋರಿ ಚರಿತ್ರೆಯನ್ನೇ ಹೊಂದಿರುವ ಕಾಂಗ್ರೆಸ್ ಗೆ ಬಿಜೆಪಿ ಮೇಲೆ ಆರೋಪಿಸಲು ನೈತಿಕತೆಯಿಲ್ಲ: ಸಿಟಿ ರವಿ

ಮುಂದಿನ ಸುದ್ದಿ
Show comments