Publish Date: Mon, 12 Nov 2018 (16:03 IST)
Updated Date: Mon, 12 Nov 2018 (16:04 IST)
ರಾಜಧಾನಿಯಲ್ಲಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಹತ್ತಿರದಲ್ಲಿಯೇ ಮತ್ತೊಂದು ಬಿಗಿ ಭದ್ರತೆಯ ಬಂಧಿಖಾನೆ ತಲೆ ಎತ್ತಲಿದೆ.
ನಕ್ಸಲೈಟ್ ಹಾಗೂ ಭಯೋತ್ಪಾದನೆ ಸೇರಿದಂತೆ ಇತರ ವಿದ್ವಂಸಕ ಪ್ರಕರಣಗಳ ಆರೋಪಿಗಳಿಗಾಗಿ ಬಿಗಿ ಭದ್ರತೆಯ ಬಂಧೀಖಾನೆ ನಿರ್ಮಾಣ ಮಾಡಲು ಸಿದ್ಧತೆ ನಡೆಯುತ್ತಿದೆ.
ಬಂಧೀಖಾನೆ ಆವರಣದಲ್ಲಿಯೇ ಸುಸಜ್ಜಿತ ಆಸ್ಪತ್ರೆ, ವ್ಯಕ್ತಿ ವಿಕಸ ಕೇಂದ್ರ, ಆಪ್ತ ಸಮಾಲೋಚನ ಕೊಠಡಿ, ಗ್ರಂಥಾಲಯ, ಅಡುಗೆಕೋಣೆ ಮತ್ತಿತರ ನಿರ್ಮಾಣವಾಗಲಿವೆ.
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಈಗಾಗಲೇ ಅಗತ್ಯಕ್ಕಿಂತ ಹೆಚ್ಚುವರಿ ಖೈದಿಗಳು ಇದ್ದಾರೆ.