Select Your Language

Notifications

webdunia
webdunia
webdunia
webdunia

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ

Dharamsthala Burude case, pro-Saujanya activist Jayant, SIT office

Sampriya

ಮಂಗಳೂರು , ಶನಿವಾರ, 4 ಅಕ್ಟೋಬರ್ 2025 (08:20 IST)
ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದ ಬೆಳವಣಿಗೆ ಸಂಬಂಧಿಸಿ ಸಾಕ್ಷಿ ದೂರುದಾರನಿಗೆ ಆಶ್ರಯ ನೀಡಿದ್ದ ಆರೋಪ ಪ್ರಕರಣದಲ್ಲಿ ಸೌಜನ್ಯಾ ಪರ ಹೋರಾಟಗಾರ ಜಯಂತ್ ಟಿ ಅವರ ಪತ್ನಿ ಎಸ್‌ಐಟಿ ಕಚೇರಿಯಲ್ಲಿ ಶುಕ್ರವಾರ ಹೇಳಿಕೆ ನೀಡಿದ್ದಾರೆ. 

ಜಯಂತ್ ಅವರ ಪತ್ನಿ ಬೆಂಗಳೂರಿನಿಂದ ಬೆಳಿಗ್ಗೆ ಬೆಳ್ತಂಗಡಿಗೆ ಬಂದು ಮಧ್ಯಾಹ್ನ 12 ಗಂಟೆಗೆ ಎಸ್ಐಟಿ ಅಧಿ
ಕಾರಿಗಳ ಬಳಿಗೆ ತೆರಳಿದ್ದರು. ಸಂಜೆ 4.30ರ ವರೆಗೂ ಮಾಹಿತಿ ಪಡೆದುಕೊಳ್ಳಲಾಯಿತು. 

ಮಾಧ್ಯಮವೊಂದಕ್ಕೆ  ಮಾತನಾಡಿದ ಜಯಂತ್‌, ನೋಟಿಸ್ ಬಂದಿತ್ತು. ನಾನು ಕೆಲವು ದಿನಗಳ ಹಿಂದೆ ಹೇಳಿಕೆ ದಾಖಲಿಸಿದ್ದೆ. ಪತ್ನಿಗೆ ಅನಾರೋಗ್ಯ ಇದ್ದ ಕಾರಣ ಸ್ವಲ್ಪ ತಡವಾಯಿತು. ಎಂಜಿನಿಯರಿಂಗ್ ಓದುತ್ತಿರುವ ಮಗನೊಂದಿಗೆ ತೆರಳಿ ಅವರು ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಬೇರೆ ಊರಿನಿಂದ ಹೋರಾಟಗಾರರು ಯಾರು ಬಂದರೂ ಅವರಿಗೆ ಊಟ, ಆಶ್ರಯ ನೀಡುವ ಸಂಪ್ರದಾಯ ಬೆಳೆಸಿಕೊಂಡಿದ್ದೇವೆ. ಸಾಕ್ಷಿ ದೂರುದಾರನಿಗೂ ಹಾಗೇ ಊಟ ಹಾಕಿದ್ದೆವು. ಎಸ್‌ಐಟಿಯವರು ಕರೆದಾಗ ಹೋಗುವುದು ನಮ್ಮ ಕರ್ತವ್ಯ. ಆದ್ದರಿಂದ ಮೂವರೂ ಹೇಳಿಕೆ ಕೊಟ್ಟಿದ್ದೇವೆ ಎಂದು ಅವರು ತಿಳಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ ಅಧ್ಯಾಯ 1 ವೀಕ್ಷಣೆಗೆ ಇಡೀ ಥಿಯೇಟರ್‌ ಅನ್ನೇ ಬುಕ್‌ ಮಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ