ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಊತು ಹಾಕಿದ್ದಾರೆ ಎನ್ನಲಾದ ಬುರುಡೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಕರಣದ ದೂರುದಾರ ಮುಸುಕುಧಾರಿಯ ಸ್ನೇಹಿತ ಇದು ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದಾರೆ.
ನೇತ್ರಾವತಿ ನದಿ ದಡದಲ್ಲಿ ನೂರಾರು ಮಹಿಳೆಯರು, ಯುವತಿಯರ ಶವಗಳನ್ನು ಹೂತು ಹಾಕಿದ್ದೇನೆ ಎಂಬ ಮುಸುಕುದಾರಿಯ ದೂರಿನ ಕುರಿತು ಆತನ ಜೊತೆಗೆ ಕೆಲಸ ಮಾಡಿದ್ದ ಸ್ನೇಹಿತ ರಾಜು ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯೂ ಭಾರೀ ಸುದ್ದು ಮಾಡುತ್ತಿದೆ.
ಮುಸುಕುದಾರಿ ಹೇಳಿದಂತೆ ಧರ್ಮಸ್ಥಳದ ಸುತ್ತಮುತ್ತ ನೂರಾರು, ಸಾವಿರಾರು ಶವಗಳನ್ನು ಹೂತು ಹಾಕಿಲ್ಲ. ಮುಸುಕುದಾರಿಯು ಹಣಕ್ಕಾಗಿ ಈ ರೀತಿಯ ಸುಳ್ಳು ಆರೋಪ ಮಾಡಿರುವ ಸಾಧ್ಯತೆಯಿದೆ ಎಂದು ದೂರುದಾರನ ಜೊತೆಗೆ ದೇವಸ್ಥಾನದಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಮಂಡ್ಯ ಮೂಲದ ರಾಜು ಮಾಹಿತಿ ಹೊರಹಾಕಿದ್ದಾರೆ.
ಧರ್ಮಸ್ಥಳದಲ್ಲಿ ನಾನು 10 ವರ್ಷಗಳ ಹಿಂದೆ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ನಮಗೆ ಮಾಹಿತಿ ಕಚೇರಿಯಿಂದ ವಿಷಯ ತಿಳಿಸಲಾಗಿತ್ತು. ಆಗ ನಾವು ಹೆಣಗಳನ್ನು ಎತ್ತಿ ದಡಕ್ಕೆ ತರುತ್ತಿದ್ದೆವು. ನಂತರ ಅದನ್ನು ಅಂಬುಲೆನ್ಸ್ ಮೂಲಕ ಬೆಳ್ತಂಗಡಿಗೆ ಸಾಗಿಸಲಾಗುತ್ತಿತ್ತು ಎಂದು ರಾಜು ತಿಳಿಸಿದ್ದಾರೆ.
ಮುಸುಕುದಾರಿ ಹೇಳಿದಂತೆ ನೂರಾರು ಶವಗಳನ್ನು ಹೂತಿದ್ದೇನೆ ಎನ್ನುವುದು ಸುಳ್ಳು. ಅಷ್ಟೊಂದು ಶವ ಹೂತಿದ್ದರೆ ಮೂಳೆಗಳಾದ್ರೂ ಸಿಗಬೇಕಿತ್ತು. ಜೆಸಿಬಿ ತಂದರೂ ಮೂಳೆ ಸಿಕ್ಕಿಲ್ಲ. ಕೆಲಸ ಕೊಟ್ಟ ಯಜಮಾನರ ಮೇಲೆ ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಇದು ಬಹಳ ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು.