Select Your Language

Notifications

webdunia
webdunia
webdunia
webdunia

ಆಹಾರ ಇಲಾಖೆ ಇಂದ ಮತ್ತೊಂದು ಶಾಕ್

ಆಹಾರ ಇಲಾಖೆ ಇಂದ ಮತ್ತೊಂದು ಶಾಕ್
bangalore , ಬುಧವಾರ, 18 ಅಕ್ಟೋಬರ್ 2023 (13:22 IST)
ಅಂತ್ಯೋದಯ ಹಾಗೂ ಅದ್ಯತಾ ಪಡಿತದಾರರನ್ನು ಗುರುತಿಸಿ ಹಂತವರ ಕಾರ್ಡ್ ರದ್ದುಪಡಿಸಿ ಅಗತ್ಯ ಇರುವ ಅಂತ್ಯೋದಯ ಆದ್ಯತೆ ಅವರಿಗೆ ರೇಷನ್ ಕಾರ್ಡ್ ನೀಡಲು ಇಲಾಖೆ ಮುಂದಾಗಿದೆ.ಈಗಾಗಲೇ ಕಳೆದ 6 ತಿಂಗಳಿಂದ ರೇಷನ್ ಪಡೆಯದ್ದೆ ಇದ್ದವರ ಕಾರ್ಡ್ ಕ್ಯಾನ್ಸಲ್ ಮಾಡಲು ಮುಂದಾಗಿದೆ.ಸುಮಾರು 4.62 ಲಕ್ಷ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ .ಈಗಾಗಲೇ ಇ ಕೆವೈಸಿ ಶೇಕಡಾ 96. ರಷ್ಟು ಪೂರ್ಣಗೊಂಡ ಹಿನ್ನೆಲೆ 2.95.986 ಅರ್ಜಿದಾರರು ಅದ್ಯತಾ ಪಡಿತರ ಕಾರ್ಡ್  ಪೈಕಿ ಸುಮಾರು 71.410 ಅರ್ಜಿಗಳು ರೇಷನ್ ಕಾರ್ಡ್ ಗಾಗಿ ಸಾರ್ವಜನಿಕರು ಅರ್ಜಿಯನ್ನು ಸಲ್ಲಿಸಿದ್ದಾರೆ.ಈಗಾಗಲೇ 2.92 ಲಕ್ಷ ಅರ್ಜಿ ಪೂರ್ಣ ಗೊಳ್ಳುವರೆಗೂ ಯಾವುದೇ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಇರುವುದಿಲ್ಲ.ಈಗಾಗಲೇ APL ಕಾರ್ಡ್ ಗೆ ಸಲ್ಲಿಸಿರುವ ಅರ್ಜಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ
 
ಈಗಾಗಲೇ ರೇಷನ್ ಕಾರ್ಡ್ ಗೆ ಸಲ್ಲಿಸಿರುವ 2.96 ಲಕ್ಷ ಅರ್ಜಿ ಸಲ್ಲಿಕೆ ಆಗಿವೆ.ಇವುಗಳ ವಿತರಣೆ ನಂತರ ಪ್ರಸ್ತುತ ಇರುವ APL ಹಾಗೂ BPL ಕಾರ್ಡ್ ಗಳ ಸಂಖ್ಯ ಮಿರುವಂತಿಲ್ಲ.ಈಗಾಗಲೇ 6 ತಿಂಗಳಿಂದ ನಿರಂತರವಾಗಿ ರೇಷನ್ ಪಡೆಯದ್ದೆ ಇದ್ದವರಕಾರ್ಡ್ ರದ್ದು ಪಡಿಸಲಾಗಿದೆ.ಅದ್ಯತ ಪಡೀತರ ಕಾರ್ಡ್ ಗೆ ಸಲ್ಲಿಕೆ ಆಗಿರುವ 2.96 ಲಕ್ಷ ಅರ್ಜಿಗಳು ವಿಲೇವಾರಿಯೊಂದಿಗೆ ಏಕಕಾಲದಲ್ಲಿ 6 ತಿಂಗಳ ರೇಷನ್ ಪಡೆಯದೇ ಇದ್ದವರ ಕಾರ್ಡ್ ಅಮಾನತು ಮಾಡಲಾಗುವುದು.ಅಮಾನತು ಆಗಿರುವ ರೇಷನ್ ಕಾರ್ಡ್ ಗಳು ಮತ್ತೆ ಪಡೆಯಲುಆಯಾ ತಾಲೂಕು ತಹಸೀಲ್ದಾರ್ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ನಂತರ ಖರೀದಿ ನೀಡಿದ ಬಳಿಕ ಹಂತವರಿಗೆ ಯಾವ ಕಾರ್ಡ್ ವಿತರಣೆ ಮಾಡಬೇಕು ಎಂದು ಇಲಾಖೆ ನಿರ್ಧಾರಿಸುತ್ತದೆ.ಹೀಗೆ ಆಹಾರ ಇಲಾಖೆ ಇಂದ ಅಧಿಕೃತ ಆದೇಶ ಹೊರಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ