Select Your Language

Notifications

webdunia
webdunia
webdunia
webdunia

ಕೋವಿಡ್ ಬೆನ್ನಲ್ಲೇ ಶುರುವಾಯ್ತು ಮತ್ತೊಂದು ಹೊಸ ವೈರಸ್ ಭೀತಿ..!

ಕೋವಿಡ್ ಬೆನ್ನಲ್ಲೇ  ಶುರುವಾಯ್ತು ಮತ್ತೊಂದು ಹೊಸ ವೈರಸ್ ಭೀತಿ..!
bangalore , ಮಂಗಳವಾರ, 11 ಏಪ್ರಿಲ್ 2023 (13:56 IST)
ದೇಶದ ಜನರಿಗೆ  YELLOW ಪೀವರ್ ಭಯ ಶುರುವಾಗಿದೆ.ಕೋವಿಡ್ ನಿಂದ ಬಳಲಿದ್ದ ಜನರಿಗೆ ಕಾಡುತ್ತಿದೆ ಹಳದಿ ಜ್ವರ ಕಾಟ.ಇನ್ಮುಂದೆ ನೀವೇನಾದ್ರು ವಿದೇಶಕ್ಕೆ ಹೋಗ್ಬೇಕಂದ್ರೆ ಹಳದಿ ಜ್ವರ ಲಸಿಕೆ ಕಡ್ಡಾಯವಾಗಿದೆ.ಹಳದಿ ಜ್ವರ ಲಸಿಕೆಯನ್ನ ಆರೋಗ್ಯ ಇಲಾಖೆ ಕಡ್ಡಾಯಗೊಳಿಸಿದೆ
 
ವಿದೇಶದಲ್ಲಿ ಹೆಚ್ಚಾಗಿ ಯಲ್ಲೋ ಫೀವರ್ ಕಾಣಿಸಿಕೊಳ್ತಿದೆ.ಸೌತ್ ಆಫ್ರಿಕಾ, ಕೀನ್ಯಾ, ನೈಜೀರಿಯಾ, ಉಗಾಂಡ, ರಿಪಬ್ಲಿಕ್ ಆಫ್ ಕಾಂಗೋ, ದಕ್ಷಿಣ ಅಮೆರಿಕಾದ ಕೆಲ ಭಾಗದಲ್ಲಿ ಹೆಚ್ಚಾಗಿ ಕಾಣಿಕೊಂಡ ಹಳದಿ ಜ್ವರ ಕಾಣಿಸಿಕೊಂಡಿದ್ದು,ಹೊರದೇಶದಿಂದ ಬರುವವರು ಹಾಗೂ ಹೊರ ದೇಶಕ್ಕೆ ತೆರಳುವವರಿಗೆ ಲಸಿಕೆ ಕಡ್ಡಾಯಗೊಳಿಸಲಾಗಿದೆ.ಹಳದಿ ವೈರಸ್ ನಿಂದ  ಕಂಡು ಬರ್ತಿರುವ ಡೇಂಜರಸ್ ಎಲ್ಲೋ‌ ಫೀವರ್ ತಲೆನೋವು, ಜ್ವರ, ವಾಂತಿ, ಮೈಕೈ‌ನೋವು ಹಳದಿ ಜ್ವರದ ಪ್ರಮುಖ ಲಕ್ಷಣವಾಗಿದೆ.ಜಾಂಡೀಸ್ ಥರದ ಹಳದಿ ಜ್ವರ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ.ಸದ್ಯ ನಮ್ಮ ದೇಶದಲ್ಲಿ ಹಳದಿ ಜ್ವರ ಪತ್ತೆಯಾಗಿಲ್ಲ, ಆದ್ರೆ ಮುಂಜಾಗ್ರತಾ ಕ್ರಮ ಅತಿ ಮುಖ್ಯವಾಗಿದೆ
 
ಹೀಗಾಗಿ ವಿದೇಶಕ್ಕೆ ತೆರಳುವ ಪ್ರತಿಯೊಬ್ಬರು ಹಳದಿ ಜ್ವರಕ್ಕೆ ಲಸಿಕೆ ಹಾಕಿಸಿಕೊಳ್ಳೋದು ಕಡ್ಡಾಯವಾಗಿದೆ.ಬೆಂಗಳೂರಿನ ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಹಳದಿ ಜ್ವರದ ಲಸಿಕೆ  ಲಭ್ಯವಿದ್ದು,ಯಲ್ಲೋ ಫೀವರ್ ಲಸಿಕೆಗೆ‌ 300 ರೂ  ಕೇಂದ್ರ ಆರೋಗ್ಯ ಇಲಾಖೆ ನಿಗದಿ ಮಾಡಿದೆ.ಸ್ಟಾ ಮರಿಲ್ ಎಂಬ ಹಳದಿ ಜ್ವರದ ಲಸಿಕೆ ಲೈಫ್ ಟೈಮ್ ರಕ್ಷಣೆ ನೀಡಲಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್‌ಗೆ ಒಪ್ಪದ ಪತ್ನಿಯನ್ನು ಕೈ-ಕಾಲು ಕಟ್ಟಿ ಕೊಲೆಗೈದ!