Publish Date: Sat, 06 Jul 2019 (10:23 IST)
Updated Date: Sat, 06 Jul 2019 (10:32 IST)
ಬೆಂಗಳೂರು : ದೋಸ್ತಿ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಆನಂದ್ ಸಿಂಗ್ ರಾಜೀನಾಮೆ ನೀಡಿದ ಬೆನ್ನಲೇ ಇದೀಗ ದೋಸ್ತಿ ಸರ್ಕಾರದ ಮತ್ತೊಬ್ಬ ಶಾಸಕ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹೌದು. ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಎಚ್ಎನ್ ವ್ಯಾಲಿ ನೀರಿನ ವಿಚಾರದಲ್ಲಿ ಬಾಗೇಪಲ್ಲಿ ಗೆ ನೀರು ಹರಿಸದಿರುವುದಕ್ಕೆ ಸರ್ಕಾರದ ಮೇಲೆ ಕೋಪಗೊಂಡು ರಾಜೀನಾಮೆ ನೀಡುವುದಾಗಿ ಸಾರ್ವಜನಿಕ ಸಭೆಯಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ನೀರು ಬಿಡಿ ಇಲ್ಲವಾದರೆ ರಾಜೀನಾಮೆ ತೆಗೆದುಕೊಳ್ಳಿ. ವೈಯಕ್ತಿಕ ಬೆಳವಣೆಗೆ, ವ್ಯವಹಾರಕ್ಕಾಗಿ ಶಾಸಕನಾಗಿಲ್ಲ ,ಜನರ ಸಮಸ್ಯೆಗೆ ಸ್ಪಂದಿಸಲು ಶಾಸಕನಾಗಿದ್ದೇನೆ ಎಂದು ಬಾಗೇಪಲ್ಲಿಯ ಚೇಳೂರಿನಲ್ಲಿ ನಡೆದ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಬೆಂಬಲಿಗರ ಎದುರು ಸುಬ್ಬಾರೆಡ್ಡಿ ರಾಜೀನಾಮೆ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ.