Select Your Language

Notifications

webdunia
webdunia
webdunia
webdunia

ಅಣ್ಣ ಹೇಳಿದ್ದಾರೆ ತಮ್ಮ ಕೇಳುತ್ತಿರಬೇಕು-ಡಿಸಿಎಂ ಡಿಕೆಶಿ

DCM DK
bangalore , ಶುಕ್ರವಾರ, 4 ಆಗಸ್ಟ್ 2023 (17:41 IST)
ಕುಮಾರಸ್ವಾಮಿ ಆರೋಪ ವಿಚಾರವಾಗಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ಅವರ ಖುಷಿಗೆ ಅವರು ಮಾತಾನಾಡಿದಾರೆ ಶ್ರಮ ತಗೊಂಡು ಮಾತನಾಡಿದ್ದಾರೆ.ರೆಸ್ಟ್ ತಗೊಂಡು ಬಂದಿದ್ದಾರೆ ಒಳ್ಳೆದಾಗಲಿ ಐ ವಿಶ್ ಹಿಮ್ ಆಲ್ ದ ಬೆಸ್ಟ್ ಅಂತಾ ಹೇಳಿದ್ದಾರೆ.ಅಲ್ಲದೇ ಆರ್ ಆರ್ ನಗರ ವಿಚಾರದಲ್ಲಿ ನಾನು ಯಾವುದೆ ಶಿಫಾರಸ್ಸು ಮಾಡಿಲ್ಲ.ಡಿ.ಕೆ.ಸುರೇಶ್ ಕೇಳಿ ನನಗೆ ತಲೆ‌ ಕೆಟ್ಟಿದೆಯಾ ವರ್ಗಾವಣೆ ಹೇಳೋಕೆ ಅಂತಾ ಡಿಕೆಶಿವಕುಮಾರ್ ಹೇಳಿದ್ರು.
 
ಐ ಆಮ್ ಎ ಗೌರ್ಮೆಂಟ್ ಐಸೆ ಐ ಆಮ್ ಎ ಗೌರ್ಮೆಂಡ್ ಬಹಳ ಸಂತೋಷ ಅವರ ಆಶೀರ್ವಾದ ನಮಗೆ ಬಹಳ‌ ಮುಖ್ಯ ಅವರ ಮಾರ್ಗದರ್ಶನ ನಮಗೆ ಬಹಳ ಮುಖ್ಯ.ಮಾಯಾನೋ ಮಾಟಾನೋ ಜ್ಯೋತಿಷ್ಯ ನೋ, ಧರ್ಮಾನೋ ಶ್ರಮಾನೋ, ಫಲ, ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗ ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ.ಶ್ರಮ ಪಟ್ಟು ೩ ವರ್ಷ ಸರಿಯಾಗಿ ನಿದ್ರೆ ಮಾಡಲಿಲ್ಲ ಊಟ ಮಾಡಲಿಲ್ಲ.ನಮ್ಮ ಕಾರ್ಯಕರ್ತರನ್ನ ಸರಿಯಾಗಿ ಮಲಗೋಕೆ ಬಿಡಲಿಲ್ಲ ಜನರು ವಿಶ್ವಾಸ ಇಟ್ಟು ನಂಬಿಕೆ ಇಟ್ಟು ಓಟ್ ಹಾಕಿದ್ದಾರೆ .ಅಧಿಕಾರ ಕೊಟ್ಟಿದ್ದಾರೆ ಅವರ ಋಣ ತೀರಿಸಬೇಕು‌.ಪಾಪಾ ಮಾತಾಡಲಿ ಬಿಡಿ ಅವರದೆ ಆದ ಅನುಭವ ಇದೆಯಲ್ಲ ಮಾತಾನಾಡ್ತಾ ಇರಬೇಕು.ಅಣ್ಣ ಹೇಳಿದ್ದಾರೆ ತಮ್ಮ ಕೇಳುತ್ತಿರಬೇಕು ಅಂತಾ ಡಿ ಕೆ ಶಿವಕುಮಾರ್ ವ್ಯಂಗ್ಯವಾಗಿ ಮಾತನಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್,ಖರ್ಗೆ ಲೆಕ್ಕ ಲೋಕ ಗೆಲ್ಲಲು ರಣತಂತ್ರ..!