Select Your Language

Notifications

webdunia
webdunia
webdunia
webdunia

ಅನಿರುದ್ಧ್‌ಗೆ ಕಿರುತೆರೆಯಿಂದ ಬಹಿಷ್ಕಾರ?

Anirudh banned from television
bangalore , ಶನಿವಾರ, 20 ಆಗಸ್ಟ್ 2022 (13:35 IST)
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರಧಾರಿ ಬದಲಾಗ್ತಾರೆ. ಧಾರಾವಾಹಿಯಿಂದ ಅನಿರುದ್ಧ್‌ರನ್ನು ಹೊರಹಾಕಲಾಗುತ್ತೆ ಎನ್ನುವ ಮಾತು ಕೇಳಿ ಬರುತ್ತಿದೆ. ಕಿರುತೆರೆಯಿಂದಲೇ ಅನಿರುದ್ಧ್ ಬ್ಯಾನ್ ಆಗ್ತಿದ್ದಾರೆ ಅಂತಾನೂ ಹೇಳಲಾಗುತ್ತಿದೆ. ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ್ ಅವರನ್ನು ತೆಗೆದು ಹಾಕಲು ಧಾರಾವಾಹಿ ನಿರ್ದೇಶಕರು ಆಗಿರುವ ಆರೂರು ಜಗದೀಶ್ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಅನಿರುದ್ಧ್ ಮೇಲೆ ಸತತ ಆರೋಪಗಳು ಕೇಳಿ ಬಂದಿವೆ. ಶೂಟಿಂಗ್ ಸೆಟ್‌ನಲ್ಲಿ ಕಿರಿಕಿರಿ, ಆ ರೀತಿ ಮಾಡೋದಿಲ್ಲ ಈ ರೀತಿ ಮಾಡೋದಿಲ್ಲ ಎನ್ನುತ್ತಿದ್ದರು ಅಂತ ಹೇಳಲಾಗುತ್ತಿದೆ. ಡೈರೆಕ್ಟರ್ ಹೇಳಿದಂತೆ ಕೇಳದೇ, ನಾನು ಈ ರೀತಿ ಆ್ಯಕ್ಟ್ ಮಾಡೋದಿಲ್ಲ ಅಂತ ಹೇಳಿದ್ದಾರಂತೆ. ಅನಿರುದ್ಧ್ ವರ್ತನೆ ವಿರುದ್ಧ ಕನ್ನಡ ಕಿರುತೆರೆ ನಿರ್ಮಾಪಕರ ಸಂಘಕ್ಕೂ ದೂರು ಹೋಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಕನ್ನಡ ಕಿರುತೆರೆ ನಿರ್ಮಾಪಕರ ಸಂಘದಲ್ಲಿ ಸಭೆ ನಡೆಯುತ್ತಿದೆ ಅಂತ ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಸ್ಕೃತದಲ್ಲಿ ಅಲೋಕ್​​ಕುಮಾರ್​​ ಮಾತು