Select Your Language

Notifications

webdunia
webdunia
webdunia
webdunia

ಕ್ರಿಶ್ಚಿಯನ್ ರಲ್ಲಿ ಇದ್ಯಾವುದು ನಮಗೇ ಗೊತ್ತಿಲ್ಲದ ಜಾತಿ, ಉಪಜಾತಿ: ಅನಿಲ್ ಥಾಮಸ್

Anil Thomas

Krishnaveni K

ಬೆಂಗಳೂರು , ಶನಿವಾರ, 6 ಸೆಪ್ಟಂಬರ್ 2025 (13:35 IST)
ಬೆಂಗಳೂರು: ಕಾಂಗ್ರೆಸ್ ಸರಕಾರವು ಜಾತಿವಾರು ಗಣತಿ ವೇಳೆ ಧರ್ಮದ ಒಳಗೆ ಜಾತಿಗಳನ್ನು ಹುಡುಕುತ್ತಿದೆ. ಇಲ್ಲದೇ ಇರುವ ಜಾತಿಗಳನ್ನು ಹುಟ್ಟುಹಾಕುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯ ಅಧ್ಯಕ್ಷ ಅನಿಲ್ ಥಾಮಸ್ ಅವರು ಖಂಡಿಸಿದ್ದಾರೆ.
 
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2014-15ರಲ್ಲಿ ಕಾಂತರಾಜು ಅವರ ನೇತೃತ್ವದ ವರದಿ, ಹೆಗ್ಡೆಯವರ ನೇತೃತ್ವದ ವರದಿಯನ್ನು ಕಸದ ಬುಟ್ಟಿಗೆ ಹಾಕಿದೆ. ಆಗ ಕ್ರೈಸ್ತ ಸಮುದಾಯಗಳನ್ನು 44 ಉಪ ಜಾತಿಗಳ ಕಾಲಂ ಹಾಕಿ ಒಡಕು ತರುವ ಕೆಟ್ಟ ನೀತಿಯನ್ನು ಸಿದ್ದರಾಮಯ್ಯನವರ ಸರಕಾರ ಮಾಡಿತ್ತು ಎಂದು ಟೀಕಿಸಿದರು. ಈಗ ಆ ಜಾತಿಗಳ ಸಂಖ್ಯೆಯನ್ನು 52ಕ್ಕೆ ಏರಿಸಿದ್ದಾರೆ ಎಂದು ಗಮನ ಸೆಳೆದರು.
 
ಕ್ರೈಸ್ತ ಧರ್ಮದಲ್ಲಿ ಯಾವ ಜಾತಿಯೂ ಇಲ್ಲ; ಸಿದ್ದರಾಮಯ್ಯನವರ ಸರಕಾರದಲ್ಲಿ ಕೆ.ಜೆ.ಜಾರ್ಜ್, ಐವಾನ್ ಡಿಸೋಜ, ಜೆ.ಆರ್.ಲೋಬೊ, ಪ್ರೊ. ಜಾಫೆಡ್ ಮೊದಲಾದವರಿದ್ದು, ಇವರಿಗೆ ಬುದ್ಧಿ ಭ್ರಮೆ ಆಗಿದೆಯೇ ಎಂದು ಪ್ರಶ್ನಿಸಿದರು. ಅವರೆಲ್ಲರಿಗೆ ಕ್ರೈಸ್ತ ಧರ್ಮದಲ್ಲಿ ಜಾತಿ ಪದ್ಧತಿ ಇಲ್ಲವೆಂದು ಗೊತ್ತಿಲ್ಲವೇ ಎಂದು ಕೇಳಿದರು.
 
ಕ್ರೈಸ್ತರನ್ನು ಕುರುಬ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್ ಆಗಿ ಸಂವಿಧಾನದ ವಿರುದ್ಧವಾಗಿ ಕ್ರೈಸ್ತಧರ್ಮದಲ್ಲಿ ಜಾತಿ ವ್ಯವಸ್ಥೆ ತಂದು ಒಡಕನ್ನು ತರುತ್ತಿದ್ದಾರೆ. ಕಿತ್ತಾಡುವ ನಿಟ್ಟಿನಲ್ಲಿ ಜಾತಿ ವ್ಯವಸ್ಥೆ ಹುಟ್ಟು ಹಾಕುವ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಎಂದು ಹೇಳಿದರು.
 
2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಕ್ರೈಸ್ತರ ಸಂಖ್ಯೆ 11.44 ಲಕ್ಷದಷ್ಟಿತ್ತು. ಈ ಧರ್ಮದಲ್ಲಿ ರೋಮನ್ ಕ್ಯಾಥೊಲಿಕ್, ರೋಮನ್ ಕ್ಯಾಥೊಲಿಕ್ (ಸಿರಿಯನ್), ಆರ್ಥೊಡಕ್ಸ್ ಚರ್ಚ್, ಚರ್ಚ್ ಆಫ್ ಸೌತ್ ಇಂಡಿಯ, ಚರ್ಚ್ ಆಫ್ ನಾರ್ತ್ ಇಂಡಿಯ, ಲೂಥರನ್ ಚರ್ಚ್, ಬ್ರದರನ್ ಚರ್ಚ್, ಬ್ಯಾಪ್ಟಿಸ್ಟ್ ಚರ್ಚ್ ಮೊದಲಾದ ನೂರಾರು ಸಣ್ಣ ಪೆಂಟಕೋಸ್ತಲ್ ಚರ್ಚ್‍ಗಳೂ ಇವೆ. ಆದರೆ, ಜನಸಾಮಾನ್ಯರಿಗೆ ಕೇಳಿದರೆ ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ್ ಎಂದು ಜನಸಾಮಾನ್ಯರು ಹೇಳುತ್ತಾರೆ. ನೂರಾರು ಪಂಗಡಗಳಿವೆ. ನಮ್ಮಲ್ಲಿ ಜಾತಿಗಳಿಲ್ಲ; ಪಂಗಡಗಳಿವೆ. ಸರಕಾರವು ಕುಲಶಾಸ್ತ್ರ ಅಧ್ಯಯನ ಮಾಡುವಂತೆ ಒತ್ತಾಯಿಸಿದರು.
 
ಮುಸಲ್ಮಾನರಿಗೆ ಸಾಚಾರ್ ಸಮಿತಿಯಿಂದ ಯಾವ ಥರ ಅನುಕೂಲ ಆಗಿತ್ತೋ ಅದೇರೀತಿ ರಾಜ್ಯದಾದ್ಯಂತ ಕ್ರೈಸ್ತರ ಕುಲಶಾಸ್ತ್ರ ಅಧ್ಯಯನ ನಡೆಸಬೇಕೆಂದು ಅವರು ಮನವಿ ಮಾಡಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಒಳಮೀಸಲಾತಿಯಲ್ಲಿ ಅತ್ಯಂತ ಕನಿಷ್ಠ ಸಮುದಾಯಗಳಿಗೆ ನ್ಯಾಯ ಕೊಡಿ: ಬಸವರಾಜ ಬೊಮ್ಮಾಯಿ