ನಗರದಲ್ಲಿ ಕೆಲವು ದಿನಗಳಿಂದ ಬೆಲೆ ಏರಿಕೆಯ ಎಫೆಕ್ಟ್ ತಟ್ಟಿದೆ. ತರಕಾರಿ, ಸೊಪ್ಪು ದುಬಾರಿಯಾಗಿದೆ. ಮಾರ್ಕೆಟ್ ಗೆ ಹೋದ್ರೆ ಬೆಲೆ ಏರಿಕೆಯದ್ದೇ ಚರ್ಚೆ.ತರಕಾರಿ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲೇ ಇದೆ. ತರಕಾರಿ ಖರೀದಿ ಮಾಡೋದೋ ಬೇಡ್ವೊ ಅನ್ನೋ ಪರಿಸ್ಥಿತಿ ಎದುರಾಗಿದೆ. ಇನ್ನೂ ಬೆಲೆ ಏರಿಕೆಯ ಇಫೆಕ್ಟ್ ಇದೀಗ ಅಂಗನವಾಡಿ ಕೇಂದ್ರಗಳಿಗೂ ತಟ್ಟುತ್ತಿದೆ. ಬರಿ ಅನ್ನ ಮತ್ತು ತಿಳಿಸಾರಿಗೆ ಮೊರೆ ಹೋಗುವ ಸ್ಥಿತಿ ಬಂದೊದಗಿದೆ.
ದುಬಾರಿ ಬೆಲೆಯಿಂದಾಗಿ ಅಂಗನವಾಡಿಗಳಲ್ಲಿ ಒದಗಿಸುತ್ತಿರುವ ಆಹಾರದಲ್ಲಿ ಪೌಷ್ಠಿಕತೆ ಕಡಿಮೆಯಾಗಿದೆ. ಅಂಗನವಾಡಿ ಕೇಂದ್ರಗಳು ನೀಡುತ್ತಿರೋ ಊಟದಲ್ಲಿ ತರಕಾರಿ ತುಂಡುಗಳೆ ನಾಪತ್ತೆಯಾಗಿವೆ.ಇನ್ನು ಅಂಗನವಾಡಿ ಕೇಂದ್ರಗಳು ಇದೀಗ ಬರಿ ಅನ್ನ ಮತ್ತು ತಿಳಿಸಾರಿಗೆ ಮೊರೆ ಹೋಗಿದ್ದಾರೆ. ಮಕ್ಕಳು ಮತ್ತು ಬಾಣಂತಿಯಾರಿಗೆ ಪೌಷ್ಠಿಕ ಆಹಾರ ನೀಡಲಾಗುತ್ತಿತ್ತು. ಆದ್ರೆ ಬೆಲೆ ಏರಿಕೆಯ ಎಫೆಕ್ಟ್ ಗೆ ಬೇಳೆಸಾರು ಮತ್ತು ತಿಳಿಸಾರಿಗೆ ಫಿಕ್ಸ್ ಆಗಬೇಕಿದಂತಹ ಸ್ಥಿತಿ ಇದೆ.
ಶಾಲಾ ಬಿಸಿಯೂಟದಲ್ಲಿ ಪೌಷ್ಠಿಕಾಂಶದ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರ ನೀಡುವ ಅಲ್ಪ ಮೊತ್ತದಲ್ಲಿ ತರಕಾರಿ ಖರೀದಿ ಮಾಡಲು ಸಾಧ್ಯವಾಗದ ಹಿನ್ನೆಲೆ ಅಂಗನವಾಡಿ ಕೇಂದ್ರದಲ್ಲಿ ಬೇಳೆಯೊಂದಿಗೆ ಇತರ ಪೂರಕ ಸಾಂಬಾರು ಪದಾರ್ಥಗಳನ್ನು ಬಳಸಿ ಅಡುಗೆ ಮಾಡುವಂತಾಗಿದೆ. ಹೀಗಾಗಿ ಮಕ್ಕಳಿಗೆ ಪೌಷ್ಟಿಕಾಂಶ ಕೊರೆತೆ ಆಗುವ ಆತಂಕ ಎದುರಾಗಿದೆ. ಸೊಪ್ಪು ಮತ್ತು ತರಕಾರಿ ಖರೀದಿ ಮಾಡಲು ಒಂದು ಮಗುವಿಗೆ ಒಂದು ರೂಪಾಯಿ, ಗರ್ಭಿಣಿಯರಿಗೆ ಎರಡು ರೂಪಾಯಿಯಂತೆ ಸರ್ಕಾರ ಅನುದಾನ ನಿಗದಿ ಮಾಡಿದೆ. ಆದರೆ, ಈಗ ಬೆಲೆ ಏರಿಕೆಯಾಗಿದ್ದು, ಸರ್ಕಾರ ಹೆಚ್ಚು ಅನುದಾನ ನೀಡದೇ ಇರುವುದರಿಂದ ಸಮಸ್ಯೆ ಉಂಟಾಗಿದೆ