Publish Date: Tue, 15 Oct 2019 (17:59 IST)
Updated Date: Tue, 15 Oct 2019 (18:01 IST)
ಮೂತ್ರ ವಿಸರ್ಜನೆ ಮಾಡಿ ಬರುವೆ ಅಂತ ಅನುಮತಿ ಕೇಳಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿರೋ ಘಟನೆ ನಡೆದಿದೆ.
ಕುಡಿತದ ಚಟ ಬಿಡಿಸುವ ಶಿಬಿರಕ್ಕೆ ಸೇರಿದ ಕುಡುಕನೊಬ್ಬನಿಗೆ ಶಿಬಿರದಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕುಡಿತ ಬಿಡಿಸುವ ಶಿಬಿರ ಏರ್ಪಡಿಸಿತ್ತು.
ಶಿಬಿರಕ್ಕೆ ಹುಬ್ಬಳ್ಳಿಯ ಗೋಪನಕೊಪ್ಪದ ಮಂಜುನಾಥ ಎನ್ನುವರನ್ನ ಕುಡಿತದ ಚಟ ಬಿಡಿಸಲು ಮೂರು ದಿನಗಳ ಹಿಂದೆ ಶಿಬಿರಕ್ಕೆ ದಾಖಲಿಸಲಾಗಿತ್ತು. ಆದ್ರೆ ಮದ್ಯವಸ್ಯನಿ ಮಂಜುನಾಥ, ಮೂತ್ರ ವಿಸರ್ಜನೆಗೆ ಹೋಗಲು ಅನುಮತಿ ಕೇಳಿದ್ದಕ್ಕೆ ಶಿಬಿರದಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾರಂತೆ.
ಮಂಜುನಾಥನಿಗೆ ಮೂವರು ವ್ಯಕ್ತಿಗಳು ಬಾಯಲ್ಲಿ ಬಟ್ಟೆ ತುರುಕಿ ಕಟ್ಟಿಗೆಯಿಂದ ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ಮಂಜುನಾಥ ಗಂಭೀರವಾಗಿ ಗಾಯಗೊಂಡಿದ್ದಾನೆ. ಆದರೆ ಆತ ಶಿಬಿರದಿಂದ ಹೊರಹೋದ ನಂತರ ಈ ಘಟನೆ ನಡೆದಿದೆ. ಆತನ ಮೇಲಿನ ಹಲ್ಲೆಗೂ ಶಿಬಿರಕ್ಕೂ ಯಾವುದೇ ಸಂಭದವಿಲ್ಲ. ಹೀಗಂತ ಶಿಬಿರದ ಆಯೋಜಕರು ಹೇಳುತ್ತಿದ್ದಾರೆ.