Publish Date: Mon, 18 Oct 2021 (20:31 IST)
Updated Date: Mon, 18 Oct 2021 (20:32 IST)
ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಕೋಲಾರದ ಕಠಾರಿ ಪಾಳ್ಯದಲ್ಲಿ ನಡೆದಿದೆ. ಕಠಾರಿಪಾಳ್ಯದ ಅಪರಂಜಿ ನಾರಾಯಣಸ್ವಾಮಿ, ಗಂಗಾಧರ್ ಎಂಬುವರ ಬಣದ ನಡುವೆ ಹೊಡೆದಾಟ ನಡೆದಿದೆ. ಗಾಯಗೊಂಡ ಐವರು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅಲ್ಲಿಯೂ ಸಹ ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡಿವೆ. ಇನ್ನೂ ಕಠಾರಿಪಾಳ್ಯದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.