Select Your Language

Notifications

webdunia
webdunia
webdunia
webdunia

ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮೃತ್ ಪೌಲ್‌?

ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮೃತ್ ಪೌಲ್‌?
ಬೆಂಗಳೂರು , ಗುರುವಾರ, 11 ಆಗಸ್ಟ್ 2022 (10:29 IST)
ಬೆಂಗಳೂರು : ಪಿಎಸ್ಐ ನೇಮಕಾತಿ ಹಗರಣದಲ್ಲಿ ಮಾಜಿ ಎಡಿಜಿಪಿ ಅಮೃತ್ ಪೌಲ್ಗೆ ಸಂಕಷ್ಟ ಇನ್ನು ಮುಗಿದಿಲ್ಲ.
 
ಅತಿಯಾದ ಒಂಟಿತನದಿಂದ ಡಿಪ್ರೆಶನ್ಗೆ ಹೋಗಿರುವ ಅಮೃತ್ ಪೌಲ್ಗೆ ಜೈಲಾಧಿಕಾರಿಗಳು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಸ್ವಚ್ಛಂದವಾಗಿ ಹಾರಾಡಿಕೊಂಡಿದ್ದ ಹಿರಿಯ ಅಧಿಕಾರಿ ಜೈಲು ಸೇರಿದ್ದೆ ಸೇರಿದ್ದು, ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದಾರೆ. ಅದೆಷ್ಟೋ ಆರೋಪಿಗಳ ಜೈಲಿಗೆ ಕಳುಹಿಸಿದ್ದ ಅಮೃತ್ ಪೌಲ್ ಅದೇ ಆರೋಪಿಗಳ ಜೊತೆ ಕಾಲ ಕಳೆಯುವಂತೆ ಆಗಿದೆ.

ಆರೋಪಿಗಳ ಜೊತೆ ಬೆರೆಯುವುದಕ್ಕೂ ಆಗದೆ ಒಂಟಿತನ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಪ್ರೆಶನ್ಗೆ ಹೋಗಿದ್ದಾರೆ.

ಅಮೃತ್ ಪೌಲ್ ಬಂಧನವಾಗುವ ಮುಂಚೆಯಿಂದಲೂ ಡಿಪ್ರೆಶನ್ಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಮಾಡಿದ ಕೆಲಸದಿಂದ ಜೈಲು ಸೇರಿ ಅವರಿಗಿದ್ದ ಸಮಸ್ಯೆ ಉಲ್ಬಣವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರದಿಂದ ರಾಜ್ಯಗಳ ತೆರಿಗೆ ಹಣ ಬಿಡುಗಡೆ