ಅಮಿತ್ ಶಾ ಶಾಕಿಂಗ್ ಹೇಳಿಕೆ..!!!

Webdunia
ಸೋಮವಾರ, 3 ಅಕ್ಟೋಬರ್ 2022 (16:13 IST)
ಅಮಿತ್‌ ಶಾ ಕಾಶ್ಮೀರ ಭೇಟಿ ಬೆನ್ನಲ್ಲೇ ಶಾಕಿಂಗ್‌ ನ್ಯೂಸ್‌ ಒಂದು ಬಹಿರಂಗವಾಗಿದೆ. ಇತ್ತೀಚೆಗೆ ಜಮ್ಮುವಿನ ಉಧಮ್‌ಪುರ್‌ನಲ್ಲಿ ನಡೆದ ಅವಳಿ ಸ್ಫೋಟಕ್ಕೂ ಅಮಿತ್‌ ಶಾ ಭೇಟಿಗೂ ನಂಟಿತ್ತು ಅಂತ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಾದ್ದಾರೆ ಅಂತ ಪೋಲಿಸರು ಹೇಳಿದ್ದಾರೆ.
ಅಲ್ಲಿ ನಿಂತಿದ್ದ ಬಸ್‌ಗಳಲ್ಲಿ ಎರಡು ಬಾರಿ ಸ್ಫೋಟ ನಡೆದಿತ್ತು. ಆ ತನಿಖೆಯನ್ನ ಕೈಗೆತ್ತಿಕೊಂಡಿದ್ದ ಜಮ್ಮು ಪೋಲಿಸರು ಇಬ್ಬರನ್ನ ಬಂಧಿಸಿದ್ರು. ಜೊತೆಗೆ ಎರಡು ಐಇಡಿ ಸ್ಫೋಟಕಗಳು ಮತ್ತು ಮೂರು ಸ್ಟಿಕಿ ಸ್ಫೋಟಕಗಳನ್ನ ವಶಪಡಿಸಿಕೊಂಡಿದ್ರು. ಇನ್ನು ಆರೋಪಿಗಳನ್ನ ವಿಚಾರಿಸಿದಾಗ ಡ್ರೋನ್‌ ಮೂಲಕ ಈ ಸ್ಪೋಟಕಗಳನ್ನ ಪಾಕ್‌ನಿಂದ ತರಿಸಿಕೊಳ್ಳಲಾಗಿದ್ದು, ಲಷ್ಕರ್‌ ಉಗ್ರ ಸಂಘಟನೆಯ ನಂಟು ಕೂಡ ಇರೋದಾಗಿ ಹೇಳಿದ್ದಾರೆ ಎನ್ನಲಾಗಿದೆ. ಜೊತೆಗೆ ಗಣ್ಯ ವ್ಯಕ್ತಿಯೊಬ್ರು ಅಂದ್ರೆ ಕ್ಯಾಬಿನೆಟ್‌ ಮಂತ್ರಿಯೊಬ್ರು ಈ ಪ್ರದೇಶಕ್ಕೆ ಭೇಟಿ ನೀಡ್ತಾ ಇರೋದ್ರಿಂದ ಅದಕ್ಕೆ ಡಿಸ್ಟರ್ಬ್‌ ಮಾಡ್ಬೇಕು ಅಂತ ಈ ಕೃತ್ಯಗಳನ್ನ ಯೋಜಿಸಲಾಗಿತ್ತು ಅಂತ ಹೇಳಿದ್ದಾರೆ. ಅಂದ್ಹಾಗೆ ಕಾಶ್ಮೀರದ ಬರಮುಲ್ಲಾದಲ್ಲಿ ರ್ಯಾಲಿಯೊಂದ್ರಲ್ಲಿ ಭಾಗವಹಿಸಲು ಅಮಿತ್‌ ಶಾ ನಾಳೆ ಅಲ್ಲಿಗೆ ಭೇಟಿ ನೀಡಲಿದ್ದು ಮೂರು ದಿನಗಳ ಕಾಲ ಜಮ್ಮುಕಾಶ್ಮೀರದಲ್ಲಿಯೇ ಇರಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಕೇರ್ ನಿಂದ ಅತ್ಯಾಧುನಿಕ ಸೆಂಟರ್ ಆಫ್ ಎಕ್ಸೆಲೆನ್ಸ್ ಪ್ರಾರಂಭ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮೈಸೂರಿಗೆ ಹೀಗೆ ಬಂದು ಹಾಗೆ ಹೋಗಲಿದ್ದಾರೆ ರಾಹುಲ್ ಗಾಂಧಿ

ಡಿಕೆ ಶಿವಕುಮಾರ್ ಗೃಹಲಕ್ಷ್ಮಿ ಹಣ ತಲುಪಿದ್ಯಾ ಎಂದಾಗ ಇಲ್ಲ ಎಂದ ಜನ: ವಿಡಿಯೋ ಶೇರ್ ಮಾಡಿ ಟೀಕಿಸಿದ ಬಿಜೆಪಿ

ಮುಂದಿನ ಸುದ್ದಿ
Show comments