Select Your Language

Notifications

webdunia
webdunia
webdunia
webdunia

ಬಿಎಸ್ ವೈಗೆ ದೂರವಾಣಿಯಲ್ಲಿ ಏನೂ ಮಾತಾಡ್ಬೇಡಿ ಎಂದಿದ್ದರಂತೆ ಅಮಿತ್ ಶಾ!

ಅಮಿತ್ ಶಾ
ಬೆಂಗಳೂರು: ಗುಜರಾತ್ ನಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಬಿಎಸ್ ವೈ ಭೇಟಿಯಾದ ಬಗ್ಗೆ ಹಲವು ಕುತೂಹಲಕಾರಿ ಅಂಶಗಳು ಹೊರಬರುತ್ತಿವೆ.

ಅಮಿತ್ ಶಾ ಭೇಟಿಗೆ ಸತತವಾಗಿ ಯತ್ನಿಸಿದ್ದ ಬಿಎಸ್ ವೈಗೆ ಎರಡು ದಿನಗಳ ಹಿಂದಷ್ಟೇ ಅಮಿತ್ ಶಾ ರಾತ್ರಿ ವೇಳೆ ದೂರವಾಣಿಯಲ್ಲಿ ಸಿಕ್ಕಿದ್ದರಂತೆ. ಆ ಸಂದರ್ಭದಲ್ಲಿ ದೂರವಾಣಿ ಮುಖಾಂತರ ಯಾವುದೇ ಚರ್ಚೆ ಮಾಡಬೇಡಿ. ಖುದ್ದಾಗಿ ಭೇಟಿ ಮಾಡಲು ಶಾ ಸೂಚನೆ ನೀಡಿದ್ದರು ಎನ್ನಲಾಗಿದೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಯಡಿಯೂರಪ್ಪ ‘ಬಿಜೆಪಿ ಕಾರ್ಯ ಕಾರಿಣಿ ಬಗ್ಗೆ ಮಾತನಾಡಲು ಹೋಗಿದ್ದೆ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಯಾವುದೇ ಯತ್ನವೂ ನಾವು ಮಾಡುವುದಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗುಜರಾತ್ ನಲ್ಲಿ ಬಿಎಸ್ ವೈಗೆ ಅಮಿತ್ ಶಾ ನೀಡಿದ ಸೂಚನೆ ಏನು?