ಇವತ್ತು ಹುಬ್ಬಳ್ಳಿಯಲ್ಲಿ ನಮ್ಮ ಕ್ಲಿನಿಕ್ ಉದ್ಘಾಟನೆ ಇದೆ .ಈ ಸಂದರ್ಭದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದೇವೆ.ಪ್ರಾಥಮಿಕ ಹಂತದಲ್ಲೇ ಉತ್ತಮ ಚಿಕಿತ್ಸೆ ಸಿಗುವಂತೆ ಮಾಡಿದ್ದೇವೆ.ಈ ಬಜೆಟ್ ನಲ್ಲಿ ನಮ್ಮ ಕ್ಲಿನಿಕ್ ಗೆ ಹೆಚ್ಚು ಒತ್ತು ನೀಡಿದೇವೆ.ಹುಬ್ಬಳ್ಳಿಯಿಂದ ದೆಹಲಿಗೆ ಹೊರಡುತ್ತೇನೆ ಎಂದು ಸಿಎಂ ರೇಸ್ ಕೋರ್ಸ್ ನಿವಾಸದಲ್ಲಿ ಹೇಳಿದ್ರು.
ಇವತ್ತು ದೆಹಲಿಗೆ ಹೋಗ್ತಿದೀನಿ.ಗಡಿ ವಿಚಾರದ ಬಗ್ಗೆ ಅಮಿತ್ ಷಾ ಅವರು ಸಭೆ ಕರೆದಿದಾರೆ.ಗಡಿ ವಿಚಾರದಲ್ಲಿ ನಮ್ಮ ನಿಲುವನ್ನು ಅಮಿತ್ ಷಾ ಅವರಿಗೆ ಸ್ಪಷ್ಟಪಡಿಸ್ತೇನೆ.ಮಹಾರಾಷ್ಟ್ರ ಆರು ದಶಕಗಳಿಂದ ಗಡಿ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ತಿದೆ.ನಾವು ಹಾಗಲ್ಲ, ನಮಗೆ ನಮ್ಮ ನೆಲ ಜಲ ಗಡಿ ವಿಚಾರ ಮುಖ್ಯ.ಗಡಿ ವಿಚಾರದ ಬಗ್ಗೆ ಸಭೆ ಬಳಿಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡ್ತೇನೆ.ನಾನು ಎಲ್ಲ ಸಿದ್ಧತೆಗಳ ಜತೆ ಹೋಗ್ತಿದ್ದೇನೆ.ಅವಕಾಶ ಸಿಕ್ಕಿದರೆ ಸಂಪುಟ ಬಗ್ಗೆ ಅಮಿತ್ ಷಾ ಅವರ ಜತೆ ಚರ್ಚೆ ಮಾಡ್ತೇನೆ ಎಂದು ಸಿಎಂ ಹೇಳಿದ್ರು.