ಅಂಬರೀಶ್ ಪುತ್ರ ಸಚಿವ ತಮ್ಮಣ್ಣ ವಿರುದ್ಧ ಸ್ಪರ್ಧೆ?

ಸೋಮವಾರ, 22 ಏಪ್ರಿಲ್ 2019 (16:59 IST)
ಅಂಬರೀಶ್ ಅಗಲಿಕೆ ಬಳಿಕ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಸುಮಲತಾರ ರಾಜಕೀಯ ದಾರಿಯಲ್ಲೇ ಅವರ ಪುತ್ರ ಅಭಿಷೇಕ್ ಸಾಗಲಿದ್ದಾರೆ ಎನ್ನುವ ಚರ್ಚೆ ಶುರುವಾಗಿವೆ.

ರಾಜಕೀಯಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಎಂಟ್ರಿ ಕೊಡೋಕೆ ಸಿದ್ಧವಾಗಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ  ಅಭಿಷೇಕ್ ಅಂಬರೀಶ್ ಕಣಕ್ಕೆ ಇಳಿಯುವ ಬಗ್ಗೆ ಸುದ್ದಿ ಹರಿದಾಡಲಾರಂಭಿಸಿದೆ
ಸಚಿವ ಡಿ.ಸಿ.ತಮ್ಮಣ್ಣ ವಿರುದ್ಧ ಸ್ಪರ್ಧೆ ಮಾಡ್ತಿದ್ದಾರಾ ಅಭಿಷೇಕ್ ? ಎನ್ನುವ ಪ್ರಶ್ನೆ ಕೇಳಿಬರುತ್ತಿದೆ.

ಡಿ.ಸಿ.ತಮ್ಮಣ್ಣ ಯಾವುದಕ್ಕೂ ರೆಡಿ ಇರು, ಮುಂದೆ ನಿನ್ನ ಎದುರಾಳಿ ಅಭಿಷೇಕ್ ಅಂಬರೀಶ್, ತಾಕತ್ ಇದ್ರೆ ಫೇಸ್ ಮಾಡು ಎಂದು ಅಭಿಮಾನಿಗಳು ಪೋಸ್ಟ್ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಡಿ.ಸಿ.ತಮ್ಮಣ್ಣರಿಗೆ  ಅಂಬಿ ಅಭಿಮಾನಿಗಳು ಎಚ್ಚರಿಕೆ ನೀಡುತ್ತಿದ್ದಾರೆ. ಮದ್ದೂರು ವಿಧಾನಸಭಾ ಕ್ಷೇತ್ರದ ದೊಡ್ಡರಸಿನಕೆರೆ ಗ್ರಾಮ ಅಂಬಿ ಹುಟ್ಟೂರಾಗಿದೆ.

ಮದ್ದೂರು ಕ್ಷೇತ್ರದಲ್ಲಿ ಅಂಬಿ ಕುಟುಂಬಕ್ಕೆ ಸಾವಿರಾರು ಸಂಖ್ಯೆಯ ಅಭಿಮಾನಿಗಳಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ‌ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮದ್ದೂರು ಕ್ಷೇತ್ರದಲ್ಲಿ ಹೆಚ್ಚು ಲೀಡ್ ಪಡೆಯಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಶ್ರೀಲಂಕಾ ಬಾಂಬ್ ಸ್ಪೋಟದಲ್ಲಿ ಸಾವನ್ನಪ್ಪಿದವರ ಮನೆಗೆ ಅಧಿಕಾರಿಗಳು ಹೋಗಿದ್ಯಾಕೆ?