Select Your Language

Notifications

webdunia
webdunia
webdunia
webdunia

ಅಂಬೇಡ್ಕರ್ ಪ್ರತಿಮೆಗೆ ಬೆಂಕಿ; ಆಕ್ರೋಶ

ಅಂಬೇಡ್ಕರ್ ಪ್ರತಿಮೆಗೆ ಬೆಂಕಿ; ಆಕ್ರೋಶ
bangalore , ಮಂಗಳವಾರ, 16 ಮೇ 2023 (19:50 IST)
ಬೆಂಗಳೂರಿನ ಯನಗುಂಟೆಯಲ್ಲಿ ಕಿಡಿಗೇಡಿಗಳು ಅಂಬೇಡ್ಕರ್ ಪ್ರತಿಮೆಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಇದನ್ನ ಅಂಬೇಡ್ಕರ್​​ ಅಭಿಮಾನಿಗಳು ಖಂಡಿಸಿ, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 207 ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ತಡೆ ಮಾಡಿ ಪ್ರತಿಭಟನೆ ಹಿನ್ನೆಲೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ವು. ಪರೀಕ್ಷೆ, ಶಾಲೆ, ಕಚೇರಿಗಳಿಗೆ ತೆರಳಬೇಕಿರುವ ಪ್ರಯಾಣಿಕರು, ವಿದ್ಯಾರ್ಥಿಗಳು ಪರದಾಟ ನಡೆಸಿದ್ರು.. ಸಂವಿಧಾನ ಶಿಲ್ಪಿ ಅಂಬೇಡ್ಕರ್​​​​ ಪ್ರತಿಮೆಗೆ ಬೆಂಕಿ ಹಚ್ಚಿದ್ದರಿಂದ ಅಂಬೇಡ್ಕರ್​​ ಅಭಿಮಾನಿಗಳು ಕೆರಳಿ ಕೆಂಡವಾಗಿದ್ರು. ಹೆದ್ದಾರಿ ಅಡ್ಡಗಟ್ಟಿ ಟೈರ್​​ಗಳಿಗೆ ಬೆಂಕಿ ಹಾಕಿ ಪ್ರತಿಭಟನೆ ನಡೆಸಿದ್ರು. ಸ್ಥಳಕ್ಕೆ ಸೂಲಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಪ್ರತಿಭಟನೆಕಾರರ ಮನವೊಲಿಕೆಗೆ ಪೊಲೀಸರು ಯತ್ನಿಸಿದ್ರು. ಕಳೆದ ರಾತ್ರಿ ಅಂಬೇಡ್ಕರ್ ಪ್ರತಿಮೆಗೆ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಇಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾ.ರಾ ಸೋಲಿಗೆ ಅಭಿಮಾನಿ ಆತ್ಮಹತ್ಯೆಗೆ ಯತ್ನ