Select Your Language

Notifications

webdunia
webdunia
webdunia
webdunia

ಸಂಚಾರಕ್ಕೆ ಸಿದ್ದವಾಯ್ತು ಅಂಬಾರಿ ಉತ್ಸವ ಸ್ಲೀಪರ್ ಬಸ್....!

ಸಂಚಾರಕ್ಕೆ ಸಿದ್ದವಾಯ್ತು ಅಂಬಾರಿ ಉತ್ಸವ ಸ್ಲೀಪರ್ ಬಸ್....!
bangalore , ಮಂಗಳವಾರ, 21 ಫೆಬ್ರವರಿ 2023 (20:49 IST)
ರಾಜ್ಯ ರಸ್ತೆ ಸಾರಿಗೆ ನಿಗಮದ 15 ಅಂಬಾರಿ ಉತ್ಸವ ಸ್ತ್ರೀಪರ್ ವಾಹನಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲುಗಳ ಮೇಲೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಒಟ್ಟು 50 ಕ್ಲೀಪರ್ ಬಸ್ಗಳ ಪೈಕಿ ಮೊದಲ ಹಂತವಾಗಿ 15 ಬಸ್ಗಳಿಗೆ ಚಾಲನೆ ನೀಡಲಾಯಿತು. ಬಿಎಸ್-6, 9600 ಎಸ್ ಮಾದರಿಯ ಮಲ್ಟಿ ಎಕ್ಸೆಲ್ ಸ್ಲೀಪರ್ ವಾಹನ ಇದಾಗಿದೆ.
 
 ವೋಲ್ಲೋ ಮಲ್ಟಿ ಆಕ್ಸಲ್ ಕ್ಲೀಪರ್ ಬಸ್ ' ಅಂಬಾರಿ ಉತ್ಸವ' ಎಂದು ಹೆಸರಿಡಲಾಗಿದೆ. ಮೇಲ್ಮೀಯು ಏರೋಡೈನಾಮಿಕ್ ಮೇರುಕೃತಿ, ವೇಗದ ಕಾರ್ಯಾಚರಣೆಯಲ್ಲಿ ಗಾಳಿಯ ಸೆಳೆತ ತಗ್ಗಿಸಲು ಪೂರಕ ಹಾಗೂ ಇಂಧನ ಉಳಿತಾಯ 40 ಆಸನಗಳು, 2x1 ಆಸನದ ವ್ಯವಸ್ಥೆ ಹೊಂದಿದೆ. ಜೊತೆಗೆ ಪ್ರಯಾಣಿಕರಿಗೆ ಕುಳಿತುಕೊಳ್ಳುವ, ಮಲಗುವ ಸ್ಥಾನದಲ್ಲಿ ಬೆಸ್ಟ್ ಇನ್ ಕ್ಲಾಸ್ ಹೆಡ್ ರೂಮ್ ಸೌಲಭ್ಯ. ಕೆಳಗಿನ ಆಸನ 867 ಮಿ.ಮೀ., ಮೇಲಿನ ಆಸನ 850 ಮಿ.ಮೀ. ಹಾಗೂ ಹಿಂಬದಿ 790 ಮಿ.ಮೀ. ಕಂಪಾರ್ಟ್ ಮೆಂಟ್ ಆಸನಗಳು. ಪ್ರತಿ ಮೇಲಿನ ಆಸನದಲ್ಲಿ ಜಾರುವುದನ್ನು ತಡೆಯಲು ಪಿಯು ಫೋಮ್ ಲ್ಯಾಡರ್, ಕೆಳಗಿನ ಆಸನವನ್ನು ಘನಾಕೃತಿಯೊಂದಿಗೆ ಅಳವಡಿಸಿ ಬಲ ಪಡಿಸಲಾಗಿದೆ.
 
 ಕೆಎಸ್ಆರ್ಟಿಸಿ ಗೆ ತನ್ನದೇ ಆದ ಇತಿಹಾಸವಿದೆ.ಅದು ಅಷ್ಟು ಉಪಯುಕ್ತವಾಗಿರಲಿಲ್ಲ. ಆದರೆ ಬಸ್ ಸಂಸ್ಥೆಯವರೇ ವಿನ್ಯಾಸ ಮಾಡಿದ್ದಾರೆ. ಉತ್ತಮ ರೀತಿಯ ವಿನ್ಯಾಸವಾಗಿದೆ ಇದರ ಉಪಯೋಗ ಪಡಿಸಿಕೊಳ್ಳಿ, ರಾತ್ರಿ ಪ್ರಯಾಣಕ್ಕೆ ಇನ್ನಷ್ಟು ಬಸ್ ಬಳಕೆ ಸೂಕ್ತ ಎಂದರು. ನಾವೆಲ್ಲಾ ಕೆಎಸ್ಆರ್ಟಿಸಿ ಬಸ್ ನಲ್ಲೇ ನಾವು ಶಾಲೆಗೆ ಹೋಗುತ್ತಿದ್ದೆವು. ಆಗ ಬಸ್ಸುಗಳ ಚಾಲಕರೇ ಬಸ್ಸುಗಳ ಅಲಂಕಾರ ಮಾಡುತ್ತಿದ್ದರು ಅದರಲ್ಲೂ ಪೈಪೋಟಿ ಇತ್ತು, ಚಾಲಕರ ಹೆಸರೇಳಿ ಆ ಬಸ್ ಹತ್ತುತ್ತಿದ್ದೆವು ಆ ರೀತಿಯ ಹೊಂದಾಣಿಕೆ ಆಗ ಇತ್ತು. ಹಳ್ಳಿಗಾಡಿನಲ್ಲಿ ನಮ್ಮ ಜನ ಪ್ರಯಾಣ ಗುರುತಿಸಿಕೊಳ್ಳುವುದೇ ಕೆಂಪುಬಸ್ ನಿಂದ, ಇಂದು ಖಾಸಗಿ ಪೈಪೋಟಿ ಎದುರಿಸಬೇಕಿದೆ, ಯಾವ ರೂಟ್ ನಲ್ಲಿ ಲಾಭ ಇದೆಯೋ ಅಲ್ಲಿ ಮಾತ್ರ ಖಾಸಗಿ ಬಸ್ ಓಡಿಸುತ್ತಾರೆ, ಲಾಭದಾಯಕವಲ್ಲದ ಮಾರ್ಗ ನಿಗಮಕ್ಕೆ ಬಿಡುತ್ತಾರೆ ಹಾಗಾಗಿ ವಾಣಿಜ್ಯ ಮಾರ್ಗ ಮತ್ತು ಸೇವಾ ಮಾರ್ಗ ಎರಡನ್ನೂ ಒಳಗೊಂಡು ಯೋಜನೆ ಮಾಡಿ ಎಂದು ಸಲಹೆ ಕೊಟ್ಟರು.
 
 ರಾಜ್ಯ ರಸ್ತೆ ಸಾರಿಗೆ ನಿಗಮದ 15 ಅಂಬಾರಿ ಉತ್ಸವ ಸ್ತ್ರೀಪರ್ ಬಸ್ಗಳನ್ನ  ಮುಖ್ಯಮಂತ್ರಿಗಳು ಉದ್ಘಾಟಿಸಿದ್ದಾರೆ.ಈ ಬಸ್ ಗಳು ತುಂಬಾ ವಿಶೇಷತೆಯಿಂದ ಕೂಡಿದೆ.ದೇಶದಲ್ಲೇ ಮೊಟ್ಟ ಮೊದಲಿ ಬಾರಿಗೆ  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪರಿಚಯಿಸಿದೆ. ಒಂದು ಬಸ್ ನ ಬೆಲೆ 1 ಕೋಟಿ 70 ಲಕ್ಷ ರೂಗಳಾಗಿದೆ.  ಮೊದಲ ಬಾರಿಗೆ ಓಲ್ವೋ ಕಂಪನಿತೆ ತಯಾರಿಸಿದೆ. ಪ್ರಯಾಣಿಕರಿಗೆ ಎಲ್ಲಾ ರೀತಿಯ ಸೌಲಭ್ಯವನ್ನು ನೀಡಲಾಗದೆ ಎಂದು KSRTC ಮ್ಯಾನೇಜಿಂಗ್ ಡೈರೆಕ್ಟರ್ ಅನ್ಬು ಕುಮಾರ್ ತಿಳಿಸಿದ್ರು.
 
 ದಿನೇ ದಿನೇ ಎಲ್ಲವೂ ಅಪ್ ಡೇಟ್ ಆಗುತ್ತಿದಂತೆ KSRTC ಸಂಸ್ಥೆ ಕೂಡ ಪ್ರಯಾಣಿಕರಿಗೆ ಎಲ್ಲಾ ರೀತಿಯ ಸೌಲಭ್ಯವನ್ನು ಕೊಡಲು ಮುಂದಾಗಿದೆ. ಆದರೆ ಅಂಬಾರಿ ಉತ್ಸವ ಸ್ಲೀಪರ್ ಬಸ್ ಪ್ರಯಾಣ ದರ ಕೊಂಚ ಏರಿಕೆಯಾದ್ರು .ಸಂಭ್ರಮ ಜರ್ನಿ ಸಿಗಲಿದೆ ಅನ್ನೋದೆ KSRTC ಟ್ಯಾಗ್ ಲೈನ್
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿಭಟನಾ ಸ್ಥಳಕ್ಕೆ ಭಾವನ ಭೇಟಿ