Publish Date: Tue, 21 Feb 2023 (20:45 IST)
Updated Date: Tue, 21 Feb 2023 (20:49 IST)
ಬನಶಂಕರಿ ಆರನೇ ಹಂತದ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಲಿಂಗಧೀರನಹಳ್ಳಿಯ ಕಸ ಸಂಸ್ಕರಣ ಘಟಕ ಶಾಶ್ವತವಾಗಿ ಮುಚ್ಚುವಂತೆ ಇಲ್ಲವೆ ಸ್ಥಳಾಂತರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಹೋರಾಟ 8 ನೇ ದಿನಕ್ಕೆ ಮುಟ್ಟಿದ್ದು ಇಂದು ಚಲನಚಿತ್ರ ನಟಿ ಯಶವಂತಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿ ಭಾವನ ರಾಮಣ್ಣ ಭೇಟಿ ನೀಡಿ ನಿಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದ್ದು ಘಟಕ ಮುಚ್ಚುವವರಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಹೇಮಾ ಅಭಿವೃದ್ಧಿ ಸಂಘದ ಅಧ್ಯಕ್ಷ ಮಹೇಶ್ ಸೇರಿದಂತೆ ಪ್ರತಿಭಟನಾಕಾರರೊಂದಿಗೆ ಮಾತನಾಡಿ ದಾಖಲೆಗಳನ್ನು ಪಡೆದು ಈ ಕ್ಷಣವೇ ನಮ್ಮ ವಿಧಾನಸಭೆ ವಿಧಾನ ಪರಿಷತ್ತಿನ ಸದಸ್ಯರಿಗೆ ಸದನದಲ್ಲಿ ಚರ್ಚಿಸಲು ಮನವಿ ಮಾಡುವುದರ ಜೊತೆಗೆ ಮುಖ್ಯಮಂತ್ರಿಗಳ ಸಮಯ ನಿಗದಿ ಮಾಡಿಕೊಂಡು ನಿಮ್ಮೆಲ್ಲರ ಜೊತೆ ನಾನೂ ಬರುತ್ತೇನೆ ಎಂದು ಹೇಳಿದ್ದಲ್ಲದೆ ಬಿಬಿಎಂಪಿ ಆಯುಕ್ತರೊಂದಿಗೆ ತಕ್ಷಣವೇ ಮಾತನಾಡಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಆಗ್ರಹಿಸುವುದಾಗಿ ಚಿತ್ರನಟಿ ಭಾವನ ರಾಮಣ್ಣ ಹೇಳಿದರು . ಈ ಹೋರಾಟ ತಮ್ಮ ಬೆಂಬಲ ಪಕ್ಷದ ಮತಗಳಿಗಾಗಿ ಎಲ್ಲ ಮಾನವೀಯತೆಯ ನೆಲೆಯ ಮೇಲೆ ಇಲ್ಲಿ ಬಂದಿದ್ದೇನೆ ಎಂದು ತಿಳಿಸಿದರು .