Select Your Language

Notifications

webdunia
webdunia
webdunia
webdunia

ಅಲಾಯನ್ಸ್ ಏರ್ ನಿಂದ ವಿಮಾನಯಾನ ಸಂಚಾರ ಪುನರಾರಂಭ

ಅಲಾಯನ್ಸ್ ಏರ್ ನಿಂದ ವಿಮಾನಯಾನ ಸಂಚಾರ ಪುನರಾರಂಭ
ಕಲಬುರಗಿ , ಗುರುವಾರ, 28 ಮೇ 2020 (17:08 IST)
ಲಾಕ್ ಡೌನ್ ಕಾರಣ ಕಳೆದ ಎರಡು ತಿಂಗಳನಿಂದ ತನ್ನ ವಿಮಾನ ಸಂಚಾರ ಸೇವೆ ನಿಲ್ಲಿಸಿದ ಅಲಾಯನ್ಸ್ ಏರ್ ವಿಮಾನ ಸಂಸ್ಥೆಯು ಲಾಕ್ ಡೌನ್ 4.0 ಸಡಿಲಿಕೆಯ ಕಾರಣ ಮತ್ತೆ ಸೇವೆ ಆರಂಭಿಸಿದೆ.

ಬೆಂಗಳೂರು-ಕಲಬುರಗಿ ನಡುವೆ ತನ್ನ‌ ಸೇವೆ ಮತ್ತೆ ಶುರುಮಾಡಿದೆ. ಬೆಂಗಳೂರಿನಿಂದ 19 ಜನ ಯಾತ್ರಿಕರನ್ನು ಹೊತ್ತುಕೊಂಡು ಹೊರಟ ವಿಮಾನ ಬೆಳಿಗ್ಗೆ 11-45 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದು ತಲುಪಿತು. ಮರಳಿ ಮಧ್ಯಾಹ್ನ‌12-25 ಗಂಟೆಗೆ ಇಲ್ಲಿಂದ 19 ಪ್ರಯಾಣಿಕರನ್ನು ಕರೆದುಕೊಂಡು ಬೆಂಗಳೂರಿಗೆ ಮರು ಪ್ರಯಾಣ ಬೆಳೆಸಿತು.

ವಿಮಾನ ನಿಲ್ದಾಣದಿಂದ ಹೋಗುವ ಎಲ್ಲಾ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಪ್ರತಿ ಪ್ರಯಾಣಿಕನಿಂದ ಅರೋಗ್ಯದ ಬಗ್ಗೆ ಸ್ವಯಂ ದೃಢೀಕರಣ ಪಡೆದುಕೊಳ್ಳಲಾಗುತ್ತಿದೆ.

ಜೂನ್-1 ರಿಂದ ಅಲಾಯನ್ಸ್ ಏರ್ ವಿಮಾನ ಸಂಚಾರ ಸಮಯದಲ್ಲಿ ಬದಲಾವಣೆ: ಅಲಾಯನ್ಸ್ ಏರ್ ಸಂಸ್ಥೆಯ‌ ವಿಮಾನವು ಜೂನ್-1 ರಿಂದ ಸೋಮವಾರ ಮತ್ತು ಮಂಗಳವಾರ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 8-45 ಗಂಟೆಗೆ ಆಗಮಿಸಿ 9-25ಕ್ಕೆ ಬೆಂಗಳೂರಿನತ್ತ ಮರು ಪ್ರಯಾಣ ಬೆಳಸಲಿದೆ. ಬುಧವಾರದಿಂದ ರವಿವಾರ ವರೆಗೆ ಬೆಳಿಗ್ಗೆ 11-45 ಗಂಟೆಗೆ ಆಗಮಿಸಿ 12-25ಕ್ಕೆ ಬೆಂಗಳೂರಿಗೆ ಟೇಕ್ ಆಫ್ ಆಗಲಿದೆ ಎಂದು ಜ್ಣಾನೇಶ್ವರ ರಾವ್ ತಿಳಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

MLC ಚುನಾವಣೆ ಜೆಡಿಎಸ್ ಕಾಂಗ್ರೆಸ್ ಹೊಂದಾಣಿಕೆ