Select Your Language

Notifications

webdunia
webdunia
webdunia
webdunia

ಕಾಂಗ್ರೆಸ್‍ನವರ 40% ಕಮೀಷನ್ ಆರೋಪ ಸುಳ್ಳು

ಕಾಂಗ್ರೆಸ್‍ನವರ 40% ಕಮೀಷನ್ ಆರೋಪ ಸುಳ್ಳು
bangalore , ಬುಧವಾರ, 2 ನವೆಂಬರ್ 2022 (19:05 IST)
ನಮ್ಮ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿರುವವರು ಗುತ್ತಿಗೆದಾರರು ಕಾಂಗ್ರೆಸ್ ಏಜೆಂಟ್‍ರು, ಇದೆಲ್ಲ ಕಾಂಗ್ರೆಸ್ ಏಜೆಂಟರ್‌ಗಳ ಕಥೆ, ಇದು ಸಿದ್ದರಾಮಣ್ಣನ ಒಳ ತಂತ್ರಗಾರಿಕೆ ಅಂತ BJP ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. 
ಈ ಬಗ್ಗೆ ಹುಬ್ಬಳ್ಳಿಯಲ್ಲಿಮಾತನಾಡಿದ ಅವರು, ನಮ್ಮ ಸರ್ಕಾರದ ಭ್ರಷ್ಟಾಚಾರದ ಸಾಕ್ಷಿ ಪುರಾವೆ ಕೊಡಿ, ಇಲ್ಲವೇ ಲೋಕಾಯುಕ್ತಕ್ಕೆ ದೂರು ಕೊಡಿ. ಕೇವಲ ಮಾಧ್ಯಮದವರ ಮುಂದೆ ಮಾತನಾಡುವುದಲ್ಲ, ಕಾಂಗ್ರೆಸ್ ಲೋಕಾಯುಕ್ತದ ಜೀವ ತೆಗೆದಿತ್ತು, ನಾವು ಓಪನ್ ಮಾಡಿಸಿದ್ದೇವೆ. ಸಿದ್ದರಾಮಯ್ಯ ಫೈಲ್ ನನ್ನ ಬಳಿ ಇವೆ. ನಾವೆಲ್ಲ ದಾಖಲೆ ಸಂಗ್ರಹ ಮಾಡುತ್ತೇವೆ. ಸಮಯ ಬರಲಿ ನಾವು ತೋರಿಸುತ್ತೇವೆ. ದಾಖಲೆ ಇಟ್ಟುಕೊಂಡು ನಾವು ಹೋಗುತ್ತೇವೆ ಎಂದಿದ್ದಾರೆ. ಇಡೀ ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ವಿಜಯಪುರ, ಕೊಳ್ಳೆಗಾಲದಲ್ಲಿ ಸೇರಿದಂತೆ ಅತೀ ಹೆಚ್ಚು ಬಿಜೆಪಿ ಗೆದ್ದಿದೆ. ಮತದಾರರಿಗೆ ಕಾರ್ಯಕರ್ತರಿಗೆ ಅಭಿನಂದನೆಗಳು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ  ಆಡಳಿತವನ್ನು ಜನ ಮೆಚ್ಚಿದ್ದಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ ಎಂದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಪಿಗಳ ಮೊಬೈಲ್​​ FSLಗೆ ರವಾನೆ