Publish Date: Wed, 02 Nov 2022 (18:30 IST)
Updated Date: Wed, 02 Nov 2022 (18:35 IST)
ತಾಯಿಗೆ ಬೈದಿದ್ದನ್ನ ಪ್ರಶ್ನಿಸಿದ್ದಕ್ಕೆ ನಡು ರಸ್ತೆಯಲ್ಲಿ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿಯಲ್ಲಿ ಈ ಘಟನೆ ನಡೆದಿದ್ದು, ಹಲ್ಲೆ ಮಾಡುವ ದೃಶ್ಯ CCTVಯಲ್ಲಿ ಸೆರೆಯಾಗಿದೆ. ಅನಿಲ್ ಎಂಬಾತ ಕೌಶಿಕ್ ಹಾಗೂ ನಂದನ್ ತಲೆಗೆ ಪಿಸ್ತೂಲ್ ಇಟ್ಟು ಬೆದರಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಮನೆ ಖಾಲಿ ಮಾಡಿಸಲು ನಂದನ್ ಹಾಗೂ ಕೌಶಿಕ್ರ ತಾಯಿಯ ಜೊತೆ ಅನಿಲ್ ಕೆಟ್ಟದಾಗಿ ಮಾತಾಡಿದ್ದ. ಇದನ್ನ ಪ್ರಶ್ನೆ ಮಾಡಲು ಅನಿಲ್ ಕಚೇರಿ ಬಳಿ ತೆರಳಿದ್ದ ಕೌಶಿಕ್ ಮತ್ತು ನಂದನ್ ಮೇಲೆ ಹಲ್ಲೆ ನಡೆಸಲಾಗಿದೆ. ಸದ್ಯ ಆರೋಪಿ ಅನಿಲ್ ನಾಪತ್ತೆಯಾಗಿದ್ದಾನೆ. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.