Webdunia - Bharat's app for daily news and videos

Install App

ಪರ ಪುರುಷನ ಆಸೆಗೋಸ್ಕರ ಮನೆಯವರನ್ನೆಲ್ಲ ಕೊದ್ಲು!

Webdunia
ಬುಧವಾರ, 9 ಫೆಬ್ರವರಿ 2022 (09:44 IST)
ಮಂಡ್ಯ : ಮದುವೆಯಾಗಿದ್ದ ಪರ ಪುರುಷನ ಆಸೆಗೋಸ್ಕರ ನಾಲ್ವರು ಮಕ್ಕಳು ಸೇರಿದಂತೆ ಐವರನ್ನು ದಾರುಣವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ನ ಬಜಾರ್ ಲೈನ್ ಬಡಾವಣೆಯಲ್ಲಿ ಜರುಗಿದೆ.
 
ಫೆಬ್ರವರಿ 6ರಂದು ಮಂಡ್ಯದ ಕೆಆರ್ ಎಸ್ನ ಬಜಾರ್ ಲೈನ್ ಬಡಾವಣೆಯಲ್ಲಿ ಜನರು ಬೆಚ್ಚಿ ಬೀಳುವ ಘಟನೆಯೊಂದು ನಡೆದಿತ್ತು. ಮಹಿಳೆ ಸೇರಿದಂತೆ ನಾಲ್ವರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿರುವ ಸುದ್ದಿ ಕೇಳಿ ಇಡೀ ಕೆಆರ್ಎಸ್ ಜನತೆ ಆತಂಕ ವ್ಯಕ್ತಪಡಿಸಿದ್ದರು.

ಕೆಆರ್ಎಸ್ನ ಭೈಯಾದ್ ಜನಾಂಗದ ನಿವಾಸಿ ಗಂಗಾರಾಮ್ ಪತ್ನಿ ಮತ್ತು ಮಕ್ಕಳಾದ ಲಕ್ಷ್ಮೀ (32), ರಾಜ್ (13), ಕೋಮಲ್ (7), ಕುನಾಲ್ (4), ಗೋವಿಂದ (8) ಅಂದು ಕೊಲೆಯಾದ ದುರ್ದೈವಿಗಳು. ಈ ಪ್ರಕರಣ ಭೇದಿಸಲು ಸಣ್ಣ ಸುಳಿವು ಸಿಗದ ಕಾರಣ ಪೊಲೀಸರಿಗೆ ತಲೆ ನೋವು ಉಂಟು ಮಾಡಿತ್ತು ಈ ಪ್ರಕರಣ.

ಹೀಗಿದ್ದರು ಸಹ ಕೃತ್ಯ ನಡೆದ ಎರಡೇ ದಿನಗಳಲ್ಲಿ ಆರೋಪಿಯನ್ನು ಬಂಧಿಸಿದ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಮುಗ್ಧ ಜೀವಗಳ ಕೊಲೆಗೆ ಗಂಡ ಗಂಗಾರಾಮ್ನ ಅಕ್ರಮ ಸಂಬಂಧವೇ ಕಾರಣ ಎಂದು ಇದೀಗ ತಿಳಿದು ಬಂದಿದೆ.

ಗಂಗಾರಾಮ್ ಸಂಬಂಧಿ ಲಕ್ಷ್ಮೀ(34) ನಡುವೆ ಲವ್ ಡವ್ವಿ ಇದ್ದು, ಈಕೆ ನನ್ನನ್ನು ಮದುವೆಯಾಗು ಎಂದು ಹಿಂದಿನಿಲೂ ಈತನನ್ನು ಪೀಡಿಸುತ್ತಿದ್ದಳು. ಆದರೆ ಮನೆಯವರ ಒತ್ತಾಯಕ್ಕೆ ಮಣಿದು ಲಕ್ಷ್ಮೀಯನ್ನು ಮದುವೆಯಾಗಿದ್ದ. ಇದಾದ ಬಳಿಕವೂ ಸಹ ಗಂಗಾರಾಮ್ ಮತ್ತು ಕೊಲೆ ಪಾತಕಿ ಲಕ್ಷ್ಮಿ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದ್ದು, ಇದರ ನಡುವೆ ಅವಳು ಹಾಗೂ ಮಕ್ಕಳನ್ನು ಬಿಟ್ಟು ನನ್ನನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದಳು. 

ಇವರನ್ನು ಕೊಲೆ ಮಾಡಿದರೆ ನನಗೆ ಗಂಗಾರಾಮ್ ಸುಲಭವಾಗಿ ಸಿಗುತ್ತಾನೆ ಎಂದು ಫೆಬ್ರವರಿ 5ರ ರಾತ್ರಿ ಮೃತ ಲಕ್ಷ್ಮೀ ಮನೆಗೆ ಈ ಹಂತಕಿ ಲಕ್ಷ್ಮಿ ಬಂದಿದ್ದು, ಜೊತೆಯಲ್ಲಿ ಊಟ ಮಾಡಿದ್ದಾಳೆ. ನಂತರ ಎಲ್ಲರೂ ನಿದ್ರೆಗೆ ಜಾರಿದ ಬಳಿಕ ಎಲ್ಲರನ್ನು ಒಬ್ಬಳೇ ಹತ್ಯೆ ಮಾಡಿದ್ದಾಳೆ. ಊಟದಲ್ಲಿ ಮತ್ತು ಬೆರೆಸಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗುತ್ತಿದೆ. ಈ ಕೊಲೆಯನ್ನು ತಾನು ತಂದಿದ್ದ ಸುತ್ತಿಗೆಯಿಂದ ಮೊದಲು ಲಕ್ಷ್ಮೀ ಮೇಲೆ ಹಲ್ಲೆ ಮಾಡಿದ್ದಾಳೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments